
ಪ್ರಮುಖ ಸುದ್ದಿಮೈಸೂರು
ವಿಚಾರಣಾಧೀನ ಕೈದಿ ಸಾವಿನ ಪ್ರಕರಣದ ಹಿನ್ನೆಲೆ: ಕೈದಿಯ ಪೋಷಕರು ದೂರು
ಮೈಸೂರು, ಮೇ 9: ಮೈಸೂರು ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಮಂಜು ಸಾವಿನ ಪ್ರಕರಣದ ಹಿನ್ನೆಲೆ ಕೈದಿಯ ಪೋಷಕರು ಜೈಲು ಅಧೀಕ್ಷಕ ವಿರುದ್ಧ ಮಂಡಿ ಠಾಣೆಗೆ ದೂರು ನೀಡಿದ್ದಾರೆ.
ಪೋಸ್ಕೋ ಕಾಯ್ದೆಯಡಿ ಕೆ.ಆರ್.ನಗರ ಪೊಲೀಸರಿಂದ ಬಂಧಿತನಾಗಿದ್ದ ಮೃತ ಕೈದಿ ಮಂಜು ಕೆ.ಆರ್.ನಗರ ತಾಲೂಕಿನ ಬಸವರಾಜಪುರ ಗ್ರಾಮದವನು. ಅನಾರೋಗ್ಯಕ್ಕೀಡಾಗಿದ್ದ ಈತನಿಗೆ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿ ಆತನ ಪೋಷಕರು ದೂರು ನೀಡಿದ್ದಾರೆ. ಮೃತ ಮಂಜು ಪರ ವಕೀಲ ಮಧುಸೂದನ್ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. (ವರದಿ: ಕೆ.ಎಸ್,ಎಲ್.ಜಿ)