ದೇಶಪ್ರಮುಖ ಸುದ್ದಿಮನರಂಜನೆ

ಖ್ಯಾತ ಗಾಯಕ ಬಪ್ಪಿ ಲಹಿರಿ ಅಂತಿಮ ಸಂಸ್ಕಾರ : ತಾರೆಯರಿಂದ ಕಣ್ಣೀರ ವಿದಾಯ

ದೇಶ(ಮುಂಬೈ),ಫೆ.17:- ಗಾಯಕ ಮತ್ತು ಸಂಗೀತ ನಿರ್ದೇಶಕ ಬಪ್ಪಿ ಲಹರಿ ಅವರ ಅಂತಿಮ ಸಂಸ್ಕಾರವು ವಿಲೆ ಪಾರ್ಲೆಯಲ್ಲಿರುವ ಪವನ್ ಹನ್ಸ್ ಸ್ಮಶಾನದಲ್ಲಿ ನಡೆಯಿತು.
ಹಲವು ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ನಿನ್ನೆ ಅವರ ಅಂತಿಮ ಸಂಸ್ಕಾರವನ್ನು ಕುಟುಂಬದವರು ಮಾಡಿರಲಿಲ್ಲ. ವಾಸ್ತವವಾಗಿ ಬಪ್ಪಿ ಲಹರಿಯವರ ಮಗ ಬರಲು ಕಾಯುತ್ತಿದ್ದರು. ಇದಾದ ಬಳಿಕ ಗುರುವಾರ ಬೆಳಗ್ಗೆಯಿಂದ ಬಪ್ಪಿ ಲಹರಿಯ ಅಂತಿಮ ಯಾತ್ರೆ ಆರಂಭಗೊಂಡಿತ್ತು. ಅವರ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಹೂಗಳಿಂದ ಅಲಂಕರಿಸಿ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.
ಬಪ್ಪಿ ದಾ ಅವರ ಅಂತ್ಯಕ್ರಿಯೆಗೂ ಮುನ್ನ ಅನೇಕ ಗಣ್ಯರು ಅವರ ಪಾರ್ಥಿವ ಶರೀರದ ದರ್ಶನಕ್ಕೆ ಅವರ ಮನೆಗೆ ತೆರಳಿದ್ದರು. ಬಾಲಿವುಡ್ ನಟಿ ಕಾಜೋಲ್ ಬುಧವಾರ ತನ್ನ ತಾಯಿ ತನುಜಾ ಜೊತೆ ಬಪ್ಪಿ ಲಹರಿ ಮನೆಗೆ ಹೋಗಿದ್ದರು. ಇದರ ನಂತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತಾರೆಗಳು ಸಹ ಆಗಮಿಸಿದ್ದರು. ಶಕ್ತಿ ಕಪೂರ್, ಇಲಾ ಅರುಣ್, ಅಲ್ಕಾ ಯಾಗ್ನಿಕ್, ನಿಖಿಲ್ ದ್ವಿವೇದಿ ಅಂತ್ಯಕ್ರಿಯೆಯ ಸಮಯದಲ್ಲಿ ಸ್ಮಶಾನದಲ್ಲಿ ಉಪಸ್ಥಿತರಿದ್ದರು. ಇವರಲ್ಲದೆ, ರೂಪಾಲಿ ಗಂಗೂಲಿ, ಮಿಕಾ ಸಿಂಗ್, ಬಿಂದು ದಾರಾ ಸಿಂಗ್ ಕೂಡ ಸ್ಮಶಾನವನ್ನು ತಲುಪಿ ಬಪ್ಪಿ ಲಹರಿಯವರನ್ನು ಬೀಳ್ಕೊಟ್ಟರು.

ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ದಿಂದಾಗಿ ಮಂಗಳವಾರ ತಡರಾತ್ರಿ ಬಪ್ಪಿ ಲಹರಿ ಸಾವನ್ನಪ್ಪಿದ್ದರು. ಈ ಕಾಯಿಲೆಯ ಹೊರತಾಗಿ, ಅವರು ಎದೆ ಸೋಂಕಿನೊಂದಿಗೆ ಹೋರಾಡುತ್ತಿದ್ದರು. ಈ ಕಾಯಿಲೆಯಿಂದ ಹಲವಾರು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಅವರು, ಆಸ್ಪತ್ರೆಯಿಂದ ಚೇತರಿಸಿಕೊಂಡ ನಂತರ ಫೆಬ್ರವರಿ 15 ರಂದು ಅವರ ಮನೆಗೆ ಮರಳಿದ್ದರು. ಇದಾದ ಬಳಿಕ ಮಂಗಳವಾರ ಸಂಜೆ ಅವರ ಆರೋಗ್ಯ ಮತ್ತೆ ಹದಗೆಟ್ಟಿದೆ. ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿದ್ದರು.(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: