ಮೈಸೂರು

ಎಲೆಕ್ಟ್ರೋಲೈಟ್ ಎನಲೈಜರ್ ಕೊಡುಗೆ

ಮೈಸೂರು,ಫೆ.17:- ಮೈಸೂರು ಕೆ ಆರ್ ಎಸ್ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಆಸ್ಪತ್ರೆಗೆ ಮೆಹುಲ್ ಜೆ.ಪಟೇಲ್ ಮತ್ತು ಜೆ.ಆರ್.ಶಾಹ್ ಅವರು ಎಲೆಕ್ಟ್ರೋಲೈಟ್ ಎನಲೈಜರ್ ನ್ನು ಕೊಡುಗೆಯಾಗಿ ನೀಡಿದರು.
ಇದನ್ನು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರಾಜೇಶ್ವರಿ ಅವರು ಸ್ವೀಕರಿಸಿದರು. ಈ ಸಂದರ್ಭ ಮೈಸೂರು ಜಿಲ್ಲಾ ಆಸ್ಪತ್ರೆಯ ರೆಸಿಡೆಂಟ್ ಮೆಡಿಕಲ್ ಆಫೀಸರ್ ಡಾ.ನಯಾಜ್ ಪಾಷಾ, ಡಾ.ಮೋಹನ್ ಫಾರ್ಮಾಸಿಸ್ಟ್ ಡಾ. ರಾಜೇಂದ್ರ ಮತ್ತು ಡಾ. ನಿರ್ಮಲ್ ಶಾ ಇದ್ದರು.
ಎಲೆಕ್ಟ್ರೋಲೈಟ್ ಎನಲೈಜರ್ ರಕ್ತದಲ್ಲಿನ ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಫಲಿತಾಂಶವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಈ ಯಂತ್ರದ ಬೆಲೆ ಸುಮಾರು 90000ರೂ.ಇದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: