ಸುದ್ದಿ ಸಂಕ್ಷಿಪ್ತ
ಬುದ್ಧ ಪೂರ್ಣಿಮ : ವಿಶೇಷ ಆನಂದ ಆರೋಗ್ಯ –ಮೇ.10ಕ್ಕೆ
ಮೈಸೂರು.ಮೇ.9 :ವಿಜಯನಗರದ ಆಯುರ್ವೇದ ಪಂಚಕರ್ಮ ಆಸ್ಪತ್ರೆ ದೀಕ್ಷಿತ್ ಆರೋಗ್ಯ ಧಾಮವು ಬುದ್ಧ ಪೂರ್ಣಿಮಾದಂಗವಾಗಿ ವಿಶೇಷ ಆನಂದ ಆರೋಗ್ಯ ಕಾರ್ಯಕ್ರಮವನ್ನು ಮೇ.10ರಂದು ಸಂಜೆ6ಕ್ಕೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ದೈಹಿಕ ಆರೋಗ್ಯಕ್ಕೆ ಮಾನಸಿಕ ಸಮತೋಲನ ಬಗ್ಗೆ ಡಾ.ಸಿ.ಎಸ್.ಅನಿಲ್ ಕುಮಾರ್ ಉಪನ್ಯಾಸ ನೀಡುವರು. ಸಂಗೀತ ಶ್ರೀನಿಧಿಯವರಿಂದ ವೀಣಾವಾದನವಿದ್ದು ಮೃದಂಗದಲ್ಲಿ ಕುಮಾರಸ್ವಾಮಿ ಸಾಥ್ ನೀಡುವರು. (ಕೆ.ಎಂ.ಆರ್)