ಕ್ರೀಡೆದೇಶಪ್ರಮುಖ ಸುದ್ದಿ

ವೆಸ್ಟ್ ಇಂಡೀಸ್ನ ವಿರುದ್ಧದ ಟಿ.20 ಸರಣಿಯಲ್ಲಿ ಟೀಂ ಇಂಡಿಯಾಗೆ ಗೆಲುವು : ಅಂತಾರಾಷ್ಟ್ರೀಯ ಟಿ20ಯಲ್ಲಿ 100ನೇ ಜಯ

ದೇಶ(ನವದೆಹಲಿ),ಫೆ.19:- ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತೊಮ್ಮೆ ಸೋಲನುಭವಿಸಬೇಕಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ ಗಳಲ್ಲಿ 5 ವಿಕೆಟ್‌ ಗೆ 186 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡ ನಿಗದಿತ ಓವರ್‌ ಗಳಲ್ಲಿ ಮೂರು ವಿಕೆಟ್‌ ಗೆ 178 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಟೀಂ ಇಂಡಿಯಾದ 100ನೇ ಜಯವಾಗಿದೆ.
ವೆಸ್ಟ್ ಇಂಡೀಸ್ ಪರ ರೋವ್ಮನ್ ಪೊವೆಲ್ ಕೇವಲ 36 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು ಮತ್ತು ನಿಕೋಲಸ್ ಪೂರನ್ 41 ಎಸೆತಗಳಲ್ಲಿ 62 ರನ್ ಗಳಿಸಿ ಸ್ಫೋಟಕ ಇನ್ನಿಂಗ್ಸ್ ಮಾಡಿದರು. ಆದರೆ ಇಬ್ಬರೂ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ, ವಿಂಡೀಸ್ ಎಂಟು ರನ್‌ ಗಳಿಂದ ಸೋಲನ್ನು ಅನುಭವಿಸಬೇಕಾಯಿತು.
ಭಾರತ ನೀಡಿದ 187 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಅತ್ಯಂತ ನಿಧಾನಗತಿಯ ಆರಂಭವನ್ನು ಪಡೆಯಿತು. ವೆಸ್ಟ್ ಇಂಡೀಸ್ ಆರನೇ ಓವರ್ ನಲ್ಲಿ 34 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಕೈಲ್ ಮೇಯರ್ಸ್ 10 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಇದರ ನಂತರ ಬ್ರಾಂಡನ್ ಕಿಂಗ್ ಹೋರಾಟವನ್ನು ಮುಂದುವರೆಸಿದರು. ಅವರು 30 ಎಸೆತಗಳಲ್ಲಿ 22 ರನ್ ಗಳಿಸಿದರು.
ಇದಕ್ಕೂ ಮುನ್ನ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಇಶಾನ್ ಕಿಶನ್ 02 ಮತ್ತು ರೋಹಿತ್ ಶರ್ಮಾ 19 ರ ವೈಫಲ್ಯದ ನಂತರ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅರ್ಧಶತಕ ಬಾರಿಸಿದರು. ಇಬ್ಬರೂ 52-52 ರನ್‌ ಗಳ ಇನಿಂಗ್ಸ್‌ ಆಡಿದರು. ವೆಂಕಟೇಶ್ ಅಯ್ಯರ್ ಕೇವಲ 18 ಎಸೆತಗಳಲ್ಲಿ 33 ರನ್ ಗಳಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: