ಮೈಸೂರು

ಕ್ರಿಕೆಟ್ ಬೆಟ್ಟಿಂಗ್ : ಇಬ್ಬರ ಬಂಧನ

ಮೈಸೂರು, ಮೇ.9:-    ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ  ನಗರದ ಸಿ.ಸಿ.ಬಿ ಮತ್ತು ನರಸಿಂಹರಾಜ ಪೋಲೀಸರು  ಎನ್.ಆರ್ . ಮೊಹಲ್ಲಾದ ಫೌಂಟೆನ್ ವೃತ್ತದಲ್ಲಿರುವ ಐಸ್ ಕ್ರೀಂ ಪಾರ್ಲರ್ ಹತ್ತಿರ  ಟಿ20 ಕ್ರಿಕೆಟ್ ಪಂದ್ಯವಾದ ಸನ್ ರೈಸರ್ಸ್ ಹೈದರಬಾದ್ ವಿ/ಎಸ್ ಮುಂಬಯಿ ಇಂಡಿಯನ್ಸ್ ಪಂದ್ಯಕ್ಕೆ ಸಂಬಂಧಪಟ್ಟಂತೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ  ಇಬ್ಬರು ವ್ಯಕ್ತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ರಾಜೇಂದ್ರನಗರದ ರುದ್ರೇಶ್ (23), ದಾಸ್ತಿಕೊಳ ಗ್ರಾಮದ ಶಬರೀಶ್ ಬಿ.ಎಂ ಎಂದು ಹೇಳಲಾಗಿದೆ. ಬಂಧಿತರಿಂದ ಬೆಟ್ಟಿಂಗ್ ಗೆ ಬಳಸಲಾದ 25,400ರೂ. ನಗದು, ಎರಡು ಮೊಬೈಲ್ ಫೋನ್, ಮೂರು ಎಟಿಎಂ ಕಾರ್ಡ್, ಒಂದು ದ್ವಿಚಕ್ರವಾಹನ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. – (ವರದಿ:ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: