ಮೈಸೂರು

ಬುದ್ಧ ಜಯಂತಿ ಆಚರಣೆ

ಮೈಸೂರು, ಮೇ.9:-  ಮಹಾಬೋಧಿ ಮೈತ್ರಿ ಮಂಡಲ ಮೈಸೂರು ವತಿಯಿಂದ 2561ನೇ ಬುದ್ಧ ಜಯಂತಿಯನ್ನು ಸರಸ್ವತಿಪುರಂನಲ್ಲಿರುವ ಮಹಾಬೋಧಿ ಕಾರ್ಲಾ ಸ್ಟೂಡೆಂಟ್ ಹೋಂ ನಲ್ಲಿ ಮಂಗಳವಾರ  ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ಪಾಲ್ಗೊಂಡಿದ್ದರು. ಬುದ್ಧ ಪೂರ್ಣಿಮೆಯ ಮಹತ್ವವನ್ನು ಚಾಮರಾಜನಗರ ಪ್ರಸ್ತಾವತ ನಳಂದಾ ಬುದ್ಧ ವಿಶ್ವ ವಿದ್ಯಾನಿಲಯದ ಕಾರ್ಯದರ್ಶಿ  ಭಂತೆ ಬೋಧಿ ದತ್ತ ನಡೆಸಿಕೊಟ್ಟರು.  ಜಯಚಾಮರಾಜೇಂದ್ರ  ಇಂಜಿನಿಯರಿಂಗ್  ಕಾಲೇಜಿನ ಸಹಪ್ರಾಧ್ಯಾಪಕ ಎ.ತ್ಯಾಗರಾಜ ಮೂರ್ತಿ ಭಾಷಣಕಾರರಾಗಿ ಪಾಲ್ಗೊಂಡು ಬುದ್ಧನ ಜೀವನ ಶೈಲಿ, ತತ್ವಗಳನ್ನು ತಿಳಿಸಿದರು.  – (ವರದಿ:ಜಿ.ಕೆ-ಎಸ್.ಎಚ್)

Leave a Reply

comments

Related Articles

error: