
ಕರ್ನಾಟಕಪ್ರಮುಖ ಸುದ್ದಿ
ನಮ್ಮ ರಕ್ಷಣೆ ನೀವು ಮಾಡುತ್ತೀರಾ ಇಲ್ಲ ನಾವೇ ಮಾಡಿಕೊಳ್ಳಬೇಕಾ – ಸರ್ಕಾರಕ್ಕೆ ಸೂಲಿಬೆಲೆ ಪ್ರಶ್ನೆ
ರಾಜ್ಯ(ಶಿವಮೊಗ್ಗ),ಫೆ.22 : ನಮ್ಮ ರಕ್ಷಣೆ ನೀವು ಮಾಡುತ್ತೀರಾ ಇಲ್ಲ ನಾವೇ ಮಾಡಿಕೊಳ್ಳಬೇಕಾ ಎಂದು ಚಕ್ರವರ್ತಿ ಸೂಲಿಬೆಲೆ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆಯಾಗಿದ್ದು ಅವರ ಕುಟುಂಬಕ್ಕೆ ಚಕ್ರವರ್ತಿ ಸೂಲಿಬೆಲೆ ಸಾಂತ್ವನ ಹೇಳಲು ಇಂದು ಹರ್ಷನ ಮನೆಗೆ ಹೋಗಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಹಿಜಾಬ್ ವಿರುದ್ಧ ಹರ್ಷ ಗಲಾಟೆ ಮಾಡುತ್ತಿದ್ದರಿಂದ ಕೊಂದಿರುವುದಾಗಿ ಹೇಳಲಾಗುತ್ತಿದೆ. ಆದರೆ ಇದರ ಹಿಂದಿನ ಸತ್ಯವನ್ನು ಬಯಲಿಗೆ ಎಳಬೇಕು. ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಲಿಲ್ಲ ಎಂದರೆ ಮುಂದೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತದೆ. ಇಂತಹ ಘಟನೆಗಳನ್ನು ತಡೆಯಬೇಕು ಎಂಬುವುದು ಸರ್ಕಾರಕ್ಕೆ ಅರಿವಾಗಬೇಕು. ಹಿಂದೂಗಳ ಸಮಾಧಿ ಮೇಲೆ ಸರ್ಕಾರ ಕಟ್ಟಿಕೊಂಡವರು ಇನ್ನೂ ಹಿಂದೂಗಳ ಸಮಾಧಿಗೆ ಕಾರಣರಾಗುತ್ತಿದ್ದಾರೆ ಎಂದರೆ ಇದನ್ನು ಎಂದಿಗೂ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.
ಭಾರತದಲ್ಲಿ ವಾಹಬಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. 2% ಇದ್ದದ್ದು, 25% ಆಗಿದೆ ಎಂದು ಮುಸಲ್ಮಾನರೇ ಹೇಳುತ್ತಿದ್ದಾರೆ. ಇದು ಬಹಳ ಅಪಾಯಕಾರಿ ಸಂಗತಿ. ಮುಂದೆ ಇದರಿಂದ ಧಂಗೆ ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.
ಗೃಹ ಸಚಿವರ ತವರು ಜಿಲ್ಲೆಯಲ್ಲೇ ಈ ರೀತಿ ಆಗಿರುವುದು ದುರದೃಷ್ಟಕರ. ಹಾಗಾಗಿ ನೀವು ನಮ್ಮನ್ನು ರಕ್ಷಣೆ ಮಾಡುತ್ತೀರಾ ಅಥವಾ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕೋ ಎಂದು ಪ್ರಶ್ನಿಸಿದ್ದಾರೆ. ನಿನ್ನೆ ಹತ್ಯೆಯಾಗಿದೆ. ಇಂದು ಶಾಂತವಾಗಿದೆ ಎಂಬುವುದು ಖುಷಿ ಪಡುವ ವಿಚಾರವೋ, ಬೇಸರದ ವಿಚಾರವೋ ಗೊತ್ತಿಲ್ಲ. ಹರ್ಷನ ಹತ್ಯೆ 6 ತಿಂಗಳಾದರೂ ಮರೆಯಾಗುವುದಿಲ್ಲ. ಆತನ ಸಾವಿಗೆ ಪರಿಹಾರ ಕೊಡುತ್ತೇವೆ ಅಂದರೆ ಮಾತ್ರ ಇದನ್ನು ಮುಕ್ತಾಯಗೊಳಿಸಬಹುದು. ಇಲ್ಲವಾದರೆ 3-4 ತಿಂಗಳಿಗೊಮ್ಮೆ ಈ ರೀತಿಯ ಹತ್ಯೆ ಮರುಕಳಿಸುತ್ತಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂ ಹೆಸರು ಹೇಳಿಕೊಂಡು ಆಚೆ ಬರುವವರು ಹೆದರಿಕೊಳ್ಳಬೇಕು. ಹಿಂದೂಗಳು ಮನೆಯಲ್ಲಿ ಇರಬೇಕು ಎಂಬುವುದು ಮುಸಲ್ಮಾನರ ಉದ್ದೇಶ. ಅಕ್ಬರ್, ಬಾಬರ್ ಅದೇ ಕಾಲಕ್ಕೆ ನಾವು ಮರಳುತ್ತಿದ್ದೇವೆ ಎಂದರೆ ಏನು ಅರ್ಥ. ಈ ವಿಚಾರ ಇನ್ನೂ ವ್ಯಾಪಕವಾಗಬೇಕು. ಸರ್ಕಾರ ಏನೇ ಹೇಳಿದರೂ ಯಾವುದು ಸಮಾಧಾನ ನೀಡುವುದಿಲ್ಲ. ಈ ಘಟನೆಗೆ ಸೂಕ್ತವಾದ ಪರಿಹಾರ ನೀಡಿದಾಗ ಮಾತ್ರ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ ಎಂದಿದ್ದಾರೆ.(ಎಸ್.ಎಂ)