ಮೈಸೂರು

ಮೂವರು ಸರಗಳ್ಳರ ಬಂಧನ : 165 ಗ್ರಾಂ ಚಿನ್ನಾಭರಣ ವಶ

ಮೈಸೂರು,ಫೆ.23:-  ಮೈಸೂರು ನಗರದ ಸಿಸಿಬಿ ಪೊಲೀಸ್ ಅವರು ಮೂವರು ಸರಗಳ್ಳರನ್ನು  ಬಂಧಿಸಿ ಒಟ್ಟು 8,50,000 ರೂ ಬೆಲೆ ಬಾಳುವ 165 ಗ್ರಾಂ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿ ಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

20.02.2022 ರಂದು ಮೈಸೂರು ನಗರದ ಸಿಸಿಬಿ ಘಟಕದ ಪೊಲೀಸರಿಗೆ ಬಂದ
ಖಚಿತ ಮಾಹಿತಿಯ ಮೇರೆಗೆ ಹಳೆಯ ಮೂವರು ಎಂ.ಒ ಆಸಾಮಿಗಳನ್ನು ಮೈಸೂರು ನಗರದ ಲಷ್ಕರ್ ಮೊಹಲ್ಲಾದ, ಅಶೋಕ ರಸ್ತೆಯಲ್ಲಿರುವ ಇಂಗುಲಾಂಬಿಕೆ ವೈನ್ಸ್ ಸ್ಟೋರ್ಸ್ ಮುಂಭಾಗ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿ, ಆರೋಪಿಗಳು ಮೈಸೂರು ನಗರ ಮತ್ತು ಮಂಡ್ಯ ಜಿಲ್ಲಾ ವ್ಯಾಪ್ತಿಗಳಲ್ಲಿ ಸರಗಳ್ಳತನ
ಮಾಡಿರುವುದಾಗಿ ತಿಳಿಸಿದ್ದರ ಮೇರೆಗೆ ಆರೋಪಿಗಳಿಂದ ಒಟ್ಟು 04 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ 165 ಗ್ರಾಂ ತೂಕದ 05 ಚಿನ್ನದ ಸರಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ದ್ವಿ ಚಕ್ರ ವಾಹನವನ್ನು
ವಶಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯದಿಂದ ಮೈಸೂರುನಗರದ ನರಸಿಂಹರಾಜ ಠಾಣೆಯ-1, ಕುವೆಂಪುನಗರ -1, ಲಕ್ಷ್ಮಿಪುರಂ1, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ 1 ಸರಗಳ್ಳತನ ಪ್ರಕರಣ ಸೇರಿದಂತೆ ಒಟ್ಟು 04 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತದೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ ಅವರಾದ  ಗೀತಪ್ರಸನ್ನ, ಐ.ಪಿ.ಎಸ್.ಹಾಗೂ ಸಿಸಿಬಿ ಘಟಕದ ಎಸಿಪಿ ಅವರಾದ   ಸಿ.ಕೆ ಅಶ್ವಥನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: