ಕರ್ನಾಟಕಮೈಸೂರು

ಜೀವನವಿಡೀ ಯೋಗ ಅಳವಡಿಸಿಕೊಳ್ಳಿ: ಸೋಮಶೇಖರ್

ಚುಮು ಚುಮು ಚಳಿ. ಆಗ ತಾನೇ ಸೂರ್ಯ ರಶ್ಮಿಗೆ ಸೋಂಕಿ ಇಬ್ಬನಿ ಕರಗಿ ಭೂತಾಯಿಯನ್ನು ಸೇರುವ ಸಮಯ. ಸೂಜಿ ಬಿದ್ದರು ಕೇಳಿಸುವಷ್ಟು ನಿಶ್ಯಬ್ದವಿತ್ತು. ಕೇವಲ ಉಚ್ವಾಸ-ನಿಶ್ವಾಸಗಳ ಸದ್ದಷ್ಟೇ ಕಿವಿಗೆ ಕೇಳಿಸುತ್ತಿತ್ತು. ಎಲ್ಲರೂ ಸೂರ್ಯ ನಮಸ್ಕಾರದ ಭಂಗಿಯಲ್ಲಿದ್ದರು.  ಇವೆಲ್ಲ ಕಂಡು ಬಂದಿದ್ದು ಮೈಸೂರು ಅರಮನೆ ಆವರಣದಲ್ಲಿ.

ದಸರಾ ಉತ್ಸವ ಪ್ರಯುಕ್ತ ಅರಮನೆ ಅವರಣದಲ್ಲಿ ಹಮ್ಮಿಕೊಳ್ಳಲಾದ ಯೋಗ ದಸರಾ ಸೂರ್ಯನಮಸ್ಕಾರ-ಯೋಗನಡಿಗೆ ಕಾರ್ಯಕ್ರಮವನ್ನು ಶಾಸಕ ಸೋಮಶೇಖರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಯೋಗ ಒಂದು ದಿನಕ್ಕಷ್ಟೇ ಸೀಮಿತಗೊಳ್ಳಬಾರದು. ಜೀವನವಿಡಿ ಯೋಗವನ್ನು ಅಳವಡಿಸಿಕೊಂಡು ಆರೋಗ್ಯವಂತರಾಗಿ ಬಾಳಬೇಕು. ಯೋಗವೀಗ ವಿಶ್ವಾದ್ಯಂತ ವ್ಯಾಪಿಸಿದೆ ಎಂದರು.

ಯೋಗಪಟು ರಾಜೇಂದ್ರ ಪೈ, ನೆಹರು ಯುವಕೇಂದ್ರದ ನಿರ್ದೇಶಕ ನಟರಾಜ, ಸಂಸದ ಪ್ರತಾಪ್ ಸಿಂಹ ಪತ್ನಿ ಅರ್ಪಿತಾ ಉಪಸ್ಥಿತರಿದ್ದರು. ಸಹಸ್ರಾರು ಯೋಗ ಪಟುಗಳು ಪಾಲ್ಗೊಂಡಿದ್ದರು. ಅರಮನೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಯೋಗ ನಡಿಗೆ ನಡೆಸಲಾಯಿತು.

Leave a Reply

comments

Related Articles

error: