
ಕರ್ನಾಟಕಪ್ರಮುಖ ಸುದ್ದಿ
ಖೈದಿಯ ಅನುಮಾನಾಸ್ಪದ ಸಾವು
ರಾಜ್ಯ, (ಮಂಡ್ಯ) ಮೇ 10: ಖೈದಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಮಂಡ್ಯ ತಾಲೂಕು ಹೆಚ್. ಮಲ್ಲಿಗೆರೆ ಗ್ರಾಮದ ಆನಂದ್(26) ಮೃತ ದುರ್ದೈವಿ. ಫೋಸ್ಕೋ ಕಾಯ್ದೆಯಡಿ ಬಂಧಿಯಾಗಿದ್ದ ಈತ, ಅನಾರೋಗ್ಯದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಅಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಮೃತ ಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.
ಈ ಹಿನ್ನೆಲೆ ಖೈದಿಗಳು ಜೈಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. (ವರದಿ : ಎಸ್.ಎನ್, ಎಲ್.ಜಿ)