Uncategorized

ಕೆ.ಆರ್.ಕ್ಷೇತ್ರದಲ್ಲಿ 10.30 ಕೋಟಿ ರೂಗಳ ರಸ್ತೆ ಕಾಮಗಾರಿಗಳಿಗೆ ಚಾಲನೆ

ಮೈಸೂರು, ಫೆ.26:- ಕೃಷ್ಣರಾಜ ವಿಧಾನಸಭಾ ಕ್ಷೇತ್ರದ  ಶಾಸಕರಾದ  ಎಸ್.ಎ.ರಾಮದಾಸ್  ಅವರ 2020-21 ನೇ ಸಾಲಿನ ಅಪೆಂಡಿಕ್ಸ್ – ಇ ಅನುದಾನದಡಿಯಲ್ಲಿ
ಜೆ.ಪಿ.ನಗರ ಲಾಸ್ಟ್ ಸ್ಟಾಪ್ ಇಂದ ದಡದಳ್ಳಿ ಮಾರ್ಗ ದೊಡ್ಡಕಾನ್ಯ ಸೇರುವ ರಸ್ತೆ ಸಂ 00 ರಿಂದ 1.68 ಕಿ.ಮೀ ಹೊರವರ್ತುಲ ರಸ್ತೆಗೆ ಸೇರುವ ರಸ್ತೆ, ಹಾರ್ಡಿಂಗ್ ವೃತ್ತದಿಂದ ರಾಣಾ ಪ್ರತಾಪ್ ರಸ್ತೆಮಾರ್ಗ ATI ಜಂಕ್ಷನ್ ಜೆ.ಸಿ.ನಗರ,
ದೇವಯ್ಯನಹುಂಡಿ ಸರ್ಕಾರಿ ಶಾಲೆ ಹಿಂಬಾಗದ
‘ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ’  ಶಾಸಕರು ಸ್ಥಳೀಯ ನಗರ ಪಾಲಿಕೆ ಸದಸ್ಯರೊಂದಿಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ  ಶಾಸಕರಾದ ಎಸ್.ಎ.ರಾಮದಾಸ್ ಅವರು
ಬಹಳ ದಿವಸಗಳ ಕಾಲದ ಬೇಡಿಕೆ ಈಗ ಈಡೇರುತ್ತಿದೆ, ಎರಡು ಬದಿಯಲ್ಲಿಯೂ ಸಹ ಡ್ರೈನ್ ಮಾಡಿ ವ್ಯವಸ್ಥಿತ ರೀತಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಎರಡು ವರ್ಷಗಳ ಕಾಲದಲ್ಲಿ ಕೊರೊನಾ ಸಂದರ್ಭದಲ್ಲಿ ಸ್ವಲ್ಪ ಹಣಕಾಸು ತೊಂದರೆ ಇದ್ದರೂ ಸಹ ಈಗ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ನಮ್ಮ ಕ್ಷೇತ್ರದಲ್ಲಿ 422 ಕಿ.ಮೀ ರಸ್ತೆ ಇದ್ದು ಅದರಲ್ಲಿ 225 ಕಿ.ಮೀ ರಸ್ತೆಗಳನ್ನು ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ ಉಳಿದಂತಹ 194 ಕಿಮೀ ರಸ್ತೆಗಳಿಗೆ ಚಾಲನೆ ಕೊಡುವ ಕೆಲಸವನ್ನು ಮಾಡಿದ್ದೇವೆ. ರೋಡ್ ಸೇಫ್ಟಿ ಯ ದೃಷ್ಟಿಯಿಂದ ನಾವು ಆಯಾ ಪ್ರದೇಶದಲ್ಲಿರುವ ನಾಗರೀಕರನ್ನು ಆ ರಸ್ತೆಯನ್ನು ನೋಡಿಕೊಳ್ಳುವುದಕ್ಕೋಸ್ಕರ ಸಮಿತಿಗಳನ್ನು ರಚನೆ ಮಾಡುತ್ತಿದ್ದೇವೆ, ಈ ರಸ್ತೆ ಪೂರ್ಣವಾದ ಮೇಲೆ ಎಲ್ಲೆಲ್ಲಿ ಅಪಘಾತಗಳು ಸಂಭವಿಸುತ್ತಿತ್ತೋ ಅಲ್ಲಲ್ಲಿ ಸಿಸಿಟಿವಿ ಯನ್ನು ಅಳವಡಿಸುವವರಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರುಗಳಾದ  ಗೀತಾಶ್ರೀ ಯೋಗಾನಂದ್,  ಶಾರದಮ್ಮ ಈಶ್ವರ್,  ಛಾಯಾದೇವಿ ನವೀನ್,
ಬಿಜೆಪಿ ಕೆ.ಆರ್.ಕ್ಷೇತ್ರದ ಪ್ರಧಾನಕಾರ್ಯದರ್ಶಿಗಳಾದ ನಾಗೇಂದ್ರ ಕುಮಾರ್, ಓಂ ಶ್ರೀನಿವಾಸ್, ಉಪಾಧ್ಯಕ್ಷರಾದ ದೇವರಾಜೇ ಗೌಡ, ಕಾರ್ಯದರ್ಶಿಯಾದ ಗಿರೀಶ್, ಮುಖಂಡರುಗಳಾದ ಯೋಗಾನಂದ್, ನವೀನ್, ಈಶ್ವರ್, ಜನಾರ್ಧನ್, ಪ್ರಸನ್ನ, ಸತೀಶ್, ಕೃಷ್ಣ, ಮಂಜು, ಅಕ್ಷಯ್, ಸುಬ್ರಹ್ಮಣ್ಯ, ಹೊಯ್ಸಳ, ಹರೀಶ್, ಮಹೇಶ್,  ರೇವತಿ,  ಜಯಂತಿ,  ವಿಜಯಲಕ್ಷ್ಮಿ , ರವೀಂದ್ರ, ನಾಗರಾಜ್, ವಿಜಯ್ ನಾಯ್ಕ್, ರಾಜೀವ್, ಪಾಲಿಕೆ ಅಧಿಕಾರಿಗಳಾದ ರಾಜು, ಉಮೇಶ್, ದೀಪಕ್, ಗುತ್ತಿಗೆದಾರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: