ಕರ್ನಾಟಕಪ್ರಮುಖ ಸುದ್ದಿ

ಪಬ್ಲಿಕ್ ಟಿವಿ ರಾಧಾ ಹಿರೇಗೌಡರ್ ಆತ್ಮಹತ್ಯೆಗೆ ಯತ್ನಿಸಿದ್ದು ನಿಜಾನಾ?

ಪ್ರಮುಖ ಸುದ್ದಿ (ಬೆಂಗಳೂರು) ಮೇ 10 : ಸದಾ ಸುದ್ದಿ ಕೊಡುವ ಮಾಧ್ಯಮದ ಮಂದಿಯೇ ಸುದ್ದಿಯಾದ ಕತೆ ಇದೆ. ಏನು ಅಂತೀರಾ? ಪಬ್ಲಿಕ್ ಟೀವಿಯಲ್ಲಿನ ಚಿರಪರಿಚಿತ ಆ್ಯಂಕರ್ ರಾಧಾ ಹಿರೇಗೌಡರ್ ಕೂಡ ಅವರ ಬಗ್ಗೆಯೂ ಈಗ ಗಾಸಿಪ್ ಹರಿದಾಡುತ್ತಿದೆ.

ಅದೇನಪ್ಪಾ ಅಂತೀರಾ? ಬಿಗ್ ಬುಲೆಟಿನ್ ರಂಗನಾಥ್ ಅವರಿಗೆ ಸರಿಸಮವಾಗಿ ಅಬ್ಬರಿಸಿಸುವ ರಾಧಾ ಹಿರೇಗೌಡರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಗಾಳಿಸುದ್ದಿ. ಆಶ್ಚರ್ಯವಾದರೂ ಹೀಗೊಂದು ಸುದ್ದಿ ಹಬ್ಬಿದ್ದು ನಿಜ. ಈ ಸುದ್ದಿ ಕೇಳಿ ಹಿರೇಗೌಡರ್ ಆತ್ಮಹತ್ಯೆಗೆ ಯತ್ನಿಸಿದ್ರಾ..?  ಎಂದು ಜನ ಆಶ್ಚರ್ಯಪಟ್ಟರು.

ನಾನು ಬದುಕಿದ್ದೇನೆ ಅಂದ್ರು ರಾಧಾ !

ಆತ್ಮಹತ್ಯೆಗೆ ನಾನು ಯತ್ನಿಸಿಲ್ಲ. ಬದುಕಿದ್ದೇನೆ. ಈ ಗಾಳಿಸುದ್ದಿಯಿಂದ ನನ್ನ ಕುಟುಂಬದವರಿಗೂ ಗಾಬರಿ ಆಗಿದೆ’ ಎಂದು ರಾಧಾ ಹಿರೇಗೌಡರ್ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಜೊತೆಗೆ ‘ಫೋಕಸ್’ ಟಿವಿ ಕಡೆಯಿಂದ ನನಗೆ ಆಫರ್ ಇದ್ದದ್ದು ನಿಜ. ಆದ್ರೆ, ನಿರ್ಧಾರಕ್ಕೆ ಬರಲು ನನಗೆ ಕಷ್ಟ ಆಗಿತ್ತು. ಹೀಗಾಗಿ, ಸ್ವಲ್ಪ ರೆಸ್ಟ್ ತಗೊಂಡರೆ ಎಂದು ಹೇಳುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆಯಲು ರಾಧಾ ಪ್ರಯತ್ನಿಸಿದ್ದಾರೆ.

ನನಗೆ ಲೋ ಬಿಪಿ ಇದೆ. ಆಫರ್ ಕುರಿತು ಯೋಚನೆ ಜಾಸ್ತಿ ಮಾಡಿದ್ರಿಂದ ಬಿಪಿ ಲೆವೆಲ್ ನಲ್ಲಿ ನನಗೆ ಏರುಪೇರಾಯ್ತು. ಹೀಗಾಗಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಚೆಕಪ್ ಮಾಡಿಸಿಕೊಳ್ಳಲು ಹೋಗಿದ್ದೆ. ಅಲ್ಲಿ ಬ್ಲಡ್ ಟೆಸ್ಟ್ ಹಾಗೂ ಥೈರಾಯ್ಡ್ ಚೆಕ್ ಮಾಡಿಸಿ ಮನೆಗೆ ಬಂದಿದ್ದೇನೆ. ಇದಾಗಿದ್ದು ಒಂದು ವಾರದ ಹಿಂದೆ. ನನ್ನ ವಿರುದ್ಧ ಹಬ್ಬಿರುವುದು ಸುಳ್ಳು ಸುದ್ದಿ. ಒಂದು ವಾರದ ಹಿಂದೆ ನಾನು ಅಸ್ಪತ್ರೆಗೆ ಹೋಗಿದ್ದನ್ನ, ಈಗ ಆತ್ಮಹತ್ಯೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಬೇಕಿದ್ದರೆ ಆಸ್ಪತ್ರೆಗೆ ಫೋನ್ ಮಾಡಿ ವಿಚಾರಿಸಿ ಸತ್ಯ ಗೊತ್ತಾಗುತ್ತದೆ ಎಂದು ರಾಧಾ ಹಿರೇಗೌಡರ್ ಕಿಡಿ ಕಾರಿದ್ದಾರೆ.

ರಜೆಯ ಮಜಾ !

ನಾನು ಆರು ದಿನಗಳಿಂದ ರಜೆಯಲ್ಲಿದ್ದೇನೆ. ನಮ್ಮ ಊರಲ್ಲಿ ಮಜಾ ಮಾಡುತ್ತಿದ್ದೇನೆ. ಈ ನಡುವೆ ಹೀಗೆ ‘ಆತ್ಮಹತ್ಯೆ’ ಸುದ್ದಿ ಬಂದಿದೆ. ಅದ್ಯಾರು ಹೀಗೆ ಹಬ್ಬಿಸುತ್ತಿದ್ದಾರೋ, ಗೊತ್ತಿಲ್ಲ. ಶುಕ್ರವಾರ ಪಬ್ಲಿಕ್ ಟಿವಿಗೆ ಹೋಗುತ್ತೇನೆ ಎಂದು ರಾಧಾ ಹಿರೇಗೌಡರ್ ಸ್ಪಷ್ಟನೆ ನೀಡಿದ್ದಾರೆ.

– ಎನ್.ಬಿ.ಎನ್.

Leave a Reply

comments

Related Articles

error: