ಮೈಸೂರು

ಮೈಸೂರು ಮನಪಾ ಬೃಹತ್ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವಂತೆ ಸಚಿವರಲ್ಲಿ ಜಿಟಿಡಿ ಮನವಿ

ಮೈಸೂರು, ಮಾ.2:- ಮೈಸೂರು ಮಹಾನಗರ ಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಶಾಸಕ‌ ಜಿ.ಟಿ.ದೇವೇಗೌಡರು ಸಹಕಾರ ಮತ್ತು ಉಸ್ತುವಾರಿ ಸಚಿವರಲ್ಲಿ‌ ಮನವಿ ಮಾಡಿದರು.
ಮೈಸೂರು ಮಹಾನಗರ ಪಾಲಿಕೆಯಲ್ಲಿ 66 ವಾರ್ಡ್ ಗಳಿದ್ದು, ಮೈಸೂರು ಮಹಾನಗರ ಪಾಲಿಕೆಗೆ ಹೊಂದಿಕೊಂಡಂತೆ ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂಪುರ, ಕಡಕೊಳ, ರಮ್ಮನಹಳ್ಳಿ‌ ಪಟ್ಟಣ ಪಂಚಾಯತಿ ಗಳಿದ್ದು ಇವುಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿ, ಬೃಹತ್ ಮೈಸೂರು‌ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿದರು.
ರಿಂಗ್ ರಸ್ತೆಗೆ ಹೊಂದಿಕೊಂಡು ಪ್ರಾಧಿಕಾರದಿಂದ ಅನುಮೋದನೆಗೊಂಡ ಹಲವಾರು ಬಡಾವಣೆಗಳು ನಿರ್ಮಾಣಗೊಂಡಿದ್ದು, ಕುಡಿಯುವ ನೀರು, ಒಳಚರಂಡಿ, ಬೀದಿದೀಪಗಳ ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರ ಮಾಡಿಸುವಂತೆ ಸಚಿವರಲ್ಲಿ‌ ಮನವಿ ಮಾಡಿದರು.

ಪ್ರಾಧಿಕಾರಕ್ಕೆ ಬಡಾವಣೆಗಳ ನಿವಾಸಿಗಳು ಕಂದಾಯ ಪಾವತಿ ಮಾಡುತ್ತಿದ್ದು, ಮೂಡಾದವರು ಖಾಸಗಿ ಬಡಾವಣೆಗಳಲ್ಲಿ ಬೀದಿದೀಪಗಳನ್ನು ನಿರ್ವಹಣೆ ಮಾಡುತ್ತಿಲ್ಲ, ಕುಡಿಯುವ‌ ನೀರನ್ನು ಒದಗಿಸುತ್ತಿಲ್ಲ ಆದ್ದರಿಂದ ಸದರಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಿಸಿ, ಬೀದಿದೀಪ, ಕುಡಿಯುವ ನೀರು, ಒಳಚರಂಡಿ ನಿರ್ವಹಣೆ ಮಾಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲೆಯ ಶಾಸಕರಗಳು, ಲೋಕಸಭಾ ಸದಸ್ಯರು, ಪಾಲಿಕೆ ಆಯುಕ್ತರು, ಮೂಡಾ ಆಯುಕ್ತರು, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: