ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಬೀಜಿಂಗ್ ವಿಂಟರ್ ಪ್ಯಾರಾಲಿಂಪಿಕ್ಸ್‌ ಗೆ ರಷ್ಯಾದ ಆಟಗಾರರಿಗೆ ಸಿಕ್ಕಿದೆ ಗ್ರೀನ್ ಸಿಗ್ನಲ್ ; ಪ್ರವೇಶಕ್ಕಿದೆ ಷರತ್ತು

ದೇಶ(ನವದೆಹಲಿ),ಮಾ.3:- ಬೀಜಿಂಗ್‌ ನಲ್ಲಿ ನಡೆಯಲಿರುವ ವಿಂಟರ್ ಪ್ಯಾರಾಲಿಂಪಿಕ್ ಗೇಮ್ಸ್ 2022 ರಲ್ಲಿ ಭಾಗವಹಿಸಲು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ರಷ್ಯಾ ಮತ್ತು ಬೆಲಾರಸ್‌ ನ ಆಟಗಾರರಿಗೆ ಅವಕಾಶ ನೀಡಿದೆ. ಆದಾಗ್ಯೂ ಈ ಆಟಗಾರರು ರಷ್ಯಾ ಮತ್ತು ಬೆಲಾರಸ್ ಧ್ವಜಗಳ ಅಡಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಈ ಆಟಗಾರರು ತಟಸ್ಥರಾಗುವ ಮೂಲಕ ಈ ಈವೆಂಟ್‌ ನಲ್ಲಿ ಭಾಗವಹಿಸಬೇಕಾಗುತ್ತದೆ. ಎರಡೂ ದೇಶದ ಕ್ರೀಡಾಪಟುಗಳು ತಟಸ್ಥ ಎಂದು ಸ್ಪರ್ಧಿಸಲು ಅವಕಾಸ ನೀಡಲಾಗುವುದು ಎಂದು ಐಪಿಸಿ ಹೇಳಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಈ ವಾರ ರಷ್ಯಾ ಮತ್ತು ಬೆಲಾರಸ್‌ ನ ತಂಡಗಳು ಮತ್ತು ಆಟಗಾರರನ್ನು ಪಂದ್ಯಾವಳಿಯಿಂದ ಅಮಾನತುಗೊಳಿಸುವಂತೆ ಎಲ್ಲಾ ಕ್ರೀಡಾ ಒಕ್ಕೂಟಗಳಿಗೆ ಸೂಚಿಸಿತ್ತು. ಆದಾಗ್ಯೂ ಸಮಯ ಮತ್ತು ಕಾನೂನು ನಿರ್ಬಂಧಗಳು ಈ ತಂಡಗಳು ಮತ್ತು ಆಟಗಾರರನ್ನು ಕೈಬಿಡುವುದನ್ನು ತಡೆಗಟ್ಟಿದರೆ, ನಂತರ ಅವರು ಈವೆಂಟ್‌ ನಲ್ಲಿ ತಟಸ್ಥವಾಗಿ ಭಾಗವಹಿಸಲು ಅನುಮತಿಸಬಹುದು ಎಂದು ಸಮಿತಿಯು ಸೇರಿಸಿದೆ.
ಐಒಸಿ ಸಲಹೆಯ ಮೇರೆಗೆ ಐಪಿಸಿ ಹೇಳಿಕೆ ನೀಡಿದ್ದು, ‘ಈ ಆಟಗಾರರು ಪ್ಯಾರಾಲಿಂಪಿಕ್ ಧ್ವಜದ ಅಡಿಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಆದರೆ, ಅವರನ್ನು ಪದಕ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಹೇಳಿದೆ.
ಇದರೊಂದಿಗೆ ರಷ್ಯಾ ಮತ್ತು ಬೆಲಾರಸ್‌ ನಲ್ಲಿ ಇನ್ನು ಮುಂದೆ ಯಾವುದೇ ಪಂದ್ಯಾವಳಿಗಳನ್ನು ಆಯೋಜಿಸುವುದಿಲ್ಲ ಎಂದು ಐಪಿಸಿ ಘೋಷಿಸಿದೆ. ಇದು ವಿಶ್ವ ಮತ್ತು ಯುರೋಪಿಯನ್ ಚಾಂಪಿಯನ್‌ ಶಿಪ್‌ ಗಳಂತಹ ಪಂದ್ಯಾವಳಿಗಳನ್ನು ಒಳಗೊಂಡಿದೆ. ಮುಂದಿನ ಸೂಚನೆ ಬರುವವರೆಗೂ ಈ ಆದೇಶ ಹಾಗೆಯೇ ಇರುತ್ತದೆ.
ಕಳೆದ ಕೆಲವು ದಿನಗಳಲ್ಲಿ, ಹಲವಾರು ಕ್ರೀಡಾ ಫೆಡರೇಶನ್‌ಗಳು ಒಂದರ ನಂತರ ಒಂದರಂತೆ ರಷ್ಯಾವನ್ನು ಬಹಿಷ್ಕರಿಸಿರುವುದು ಗಮನಿಸಬೇಕಾದ ಸಂಗತಿ. ಇವುಗಳಲ್ಲಿ FIFA ವಿಶ್ವಕಪ್‌ನಿಂದ ವಿಶ್ವ ಅಥ್ಲೆಟಿಕ್ಸ್‌ವರೆಗಿನ ಪಂದ್ಯಾವಳಿಗಳು ಸೇರಿವೆ. ಉಕ್ರೇನ್ ವಿರುದ್ಧ ಬಲವಂತದ ಯುದ್ಧಕ್ಕಾಗಿ ರಷ್ಯಾವನ್ನು ಕ್ರೀಡಾಕೂಟದಿಂದ ಬಹಿಷ್ಕರಿಸಲಾಗುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: