ಮೈಸೂರು

ಸರಳ ವಿವಾಹಗಳನ್ನು ಕಾನೂನಾತ್ಮಕವಾಗಿಸಬೇಕು: ಡಾ.ಎಸ್.ಪಿ.ಯೋಗಣ್ಣ

ಮೈಸೂರು ಮೇ 10: ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಸರಳ ವಿವಾಹಗಳನ್ನು ಕಾನೂನಾತ್ಮಕಗೊಳಿಸಬೇಕು ಎಂದು ವೈದ್ಯಕೀಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ ಅಭಿಪ್ರಾಯಪಟ್ಟರು.

ಬುಧವಾರ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಗೋವರ್ಧನ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಬುದ್ಧ ಪೂರ್ಣಿಮೆ ಹಾಗೂ ಸರಳ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಅದ್ಧೂರಿಯ ಹೆಸರಿನಲ್ಲಿ ವಿಹಾಹಗಳು ನಡೆಯುತ್ತಿದ್ದು ಪ್ರತಿಷ್ಠೆಯ ಪ್ರಶ್ನೆಯಾಗಿದೆ, ಹಾಗಾಗಿ ಎಲ್ಲರೂ ಸಮಾಜವನ್ನು ಮೆಚ್ಚಿಸಲು ಸಾಲಸೋಲ ಮಾಡಿ ಅದ್ಧೂರಿಯಾಗಿ ವಿವಾಹ ಮಾಡುತ್ತಾರೆ. ಅದನ್ನು ಬಿಟ್ಟು ಸರಳವಾಗಿ ವಿವಾಹವಾಗಬೇಕು. ರಾಜ್ಯ ಸರ್ಕಾರ ಸರಳ ವಿವಾಹಗಳನ್ನು ಕಾನೂನಾತ್ಮಕವಾಗಿ ಮಾಡಲು ಹೊರಟಿರುವುದು ಶ್ಲಾಘನೀಯವಾಗಿದ್ದು ಕೂಡಲೇ ಮಾಡಬೇಕು ಎಂದು ಹೇಳಿದರು.

ಇದೇ ವೇಳೆ ಹೆಚ್.ಎಂ.ಹರೀಶ್ ಹಾಗೂ ಹೆಚ್.ಎಸ್.ಅಭಿಲಾಷ ಸಪ್ತಪದಿ ತುಳಿದು ಸರಳವಾಗಿ ವಿವಾಹವಾದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು, ಸಾಹಿತಿಗಳಾದ ಪ್ರೊ.ಕೆ.ಎಸ್.ಭಗವಾನ್, ಬನ್ನೂರು ಕೆ.ರಾಜು, ವೇದಿಕೆಯ ಅಧ್ಯಕ್ಷೆ ಹೆಚ್.ಎಲ್.ಯಮುನಾ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಬಸವೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ,ಎಂ)

Leave a Reply

comments

Related Articles

error: