
ದೇಶಪ್ರಮುಖ ಸುದ್ದಿಮನರಂಜನೆ
ಸಹೋದರಿ ಸನಾ ವಿವಾಹ ನಂತರ ಭಾವುಕರಾದ ಬಾಲಿವುಡ್ ನಟ ಶಾಹಿದ್ ಕಪೂರ್
ದೇಶ(ಮುಂಬೈ),ಮಾ.3:- ಬಾಲಿವುಡ್ ನಟ ಶಾಹಿದ್ ಕಪೂರ್ ಸಹೋದರಿ ಸನಾ ಕಪೂರ್ ಅವರ ವಿವಾಹ ನೆರವೇರಿದೆ. ಇತ್ತೀಚೆಗೆ ಶಾಹಿದ್ ಇನ್ಸ್ಟಾಗ್ರಾಮ್ನಲ್ಲಿ ತನ್ನ ಜೊತೆ ಸನಾ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಇಬ್ಬರೂ ಒಡಹುಟ್ಟಿದವರು ಒಟ್ಟಿಗೆ ನಿಂತಿರುವುದನ್ನು ಕಾಣಬಹುದು. ನಟ, ಬರಹಗಾರ ಮತ್ತು ನಿರ್ದೇಶಕರಾಗಿರುವ ಮಯಾಂಕ್ ಪಹ್ವಾ ಅವರನ್ನು ಸನಾ ವಿವಾಹವಾಗಿದ್ದಾರೆ. ಮಾರ್ಚ್ 2 ರಂದು ಮಹಾಬಲೇಶ್ವರದಲ್ಲಿ ಈ ವಿವಾಹ ನೆರವೇರಿದೆ.
ಮಯಾಂಕ್ ಅವರ ಪೋಷಕರು ಸೀಮಾ ಪಹ್ವಾ ಮತ್ತು ಮನೋಜ್ ಪಹ್ವಾ ಅವರೂ ಕೂಡ ನಟರು. ನಟ ಶಾಹಿದ್ ಕಪೂರ್ ಮತ್ತು ಸನಾ ಕಪೂರ್ ಅವರ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಟ ಭಾವನಾತ್ಮಕ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.
‘ಸಮಯ ಹೇಗೆ ಕಳೆದು ಹೋಗುತ್ತಿದೆ. ಪುಟ್ಟ ಬಿಟ್ಟೋ ಈಗ ವಧು ಆಗಿದ್ದಾಳೆ. ಎಲ್ಲರೂ ತುಂಬಾ ಬೇಗ ಬೆಳೆದಿದ್ದಾರೆ, ನನ್ನ ಪ್ರೀತಿಯ ಸಹೋದರಿ, ಇದು ನಿನ್ನ ಅದ್ಭುತ ಪ್ರಯಾಣಕ್ಕೆ ಭಾವನಾತ್ಮಕ ಆರಂಭವಾಗಿದೆ’ ಎಂದು ಬರೆದುಕೊಂಡಿದ್ದು, ಶಾಹಿದ್ ಕಪೂರ್ ಅವರ ಈ ಪೋಸ್ಟ್ಗೆ ಇದುವರೆಗೆ 75 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು 1300 ಕ್ಕೂ ಹೆಚ್ಚು ಕಾಮೆಂಟ್ ಗಳು ಬಂದಿವೆ. ಅದೇ ವೇಳೆ ಸನಾ ಇನ್ಸ್ಟಾಗ್ರಾಮ್ನಲ್ಲಿ ಮದುವೆಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಪತಿ ಮಯಾಂಕ್ ಜೊತೆ ಇದ್ದಾರೆ. 2015 ರ ‘ಶಾಂದಾರ್’ ಚಿತ್ರದಲ್ಲಿ ಶಾಹಿದ್ ಕಪೂರ್ ಜೊತೆ ಸನಾ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)