
ಪ್ರಮುಖ ಸುದ್ದಿಮೈಸೂರು
ದಿನೇ ದಿನೇ ಕುಸಿಯುತ್ತಿದೆ ಜಲಾಶಯ ನೀರಿನ ಮಟ್ಟ : ಕುಡಿಯುವ ನೀರಿಗೂ ಬರಲಿದೆ ತತ್ವಾರ
ಪ್ರಮುಖಸುದ್ದಿ, ಮೈಸೂರು, ಮೇ.10:- ರಾಜ್ಯದ ಪ್ರಮುಖ ಜಲಾಶಯಗಳೊಂದಾದ ಕೆ.ಆರ್.ಎಸ್ ಜಲಾಶಯದ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಮಳೆ ಬಂದು ಜಲಾಶಯ ತುಂಬದಿದ್ದಲ್ಲಿ ಕುಡಿಯುವ ನೀರಿಗೂ ತತ್ವಾರ ಬರಲಿದೆ.
ಮಂಡ್ಯ ಜಿಲ್ಲೆಯಲ್ಲಿರುವ ಕೆ.ಆರ್.ಎಸ್ ಜಲಾಶಯದಿಂದ ಬೆಂಗಳೂರು, ಮೈಸೂರು, ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಜಲಾಶಯದ ನೀರು ದಿನೇ ದಿನೇ ಕುಸಿಯುತ್ತಿರುವುದು ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಜಲಾಶಯದಲ್ಲಿ ನೀರಿನ ಮಟ್ಟ 70ಅಡಿ ಇದ್ದು, ಜಲಾಶಯದ ಗರಿಷ್ಠ ಮಟ್ಟ 124.80 ಗರಿಷ್ಠ ಅಡಿಗಳಾಗಿದೆ. ಸದ್ಯ ಕೆ.ಆರ್.ಎಸ್ ಜಲಾಶಯದಲ್ಲಿ ಈಗ ನೀರಿನ ಮಟ್ಟ 70ಕ್ಕೆ ಕುಸಿದಿದ್ದು ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಇನ್ನು ಕಡಿಮೆಯಾಗುವ ಸಂಭವವಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಲಿದೆ ಅಂತ ಹೇಳಲಾಗುತ್ತಿದೆ. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗದೆ ಜಲಾಶಯ ಸಂಪೂರ್ಣ ಬರಿದಾಗಿದ್ದು ಎತ್ತ ನೋಡಿದರೂ ಜಲಾಶಯ ನೀರಿಲ್ಲದೆ ಖಾಲಿಯಾಗಿದ್ದು ಬಂಡೆಗಳು ಕಾಣತೊಡಗಿವೆ. ಮುಂದಿನ ದಿನಗಳಲ್ಲಿ ಮಳೆಯಾಗಿ ಜಲಾಶಯ ತುಂಬದಿದ್ದರೆ ಕುಡಿಯುವ ನೀರಿಗೆ ಹಾಹಾಕಾರವೇಳಲಿದೆ. – (ವರದಿ: ಕೆ.ಎಸ್,ಎಸ್.ಎಚ್)