ಮೈಸೂರು

ನಿಧಿ ಸಂಗ್ರಹಕ್ಕಾಗಿ ಹಾಸ್ಯ ಸಂಜೆ ಕಾರ್ಯಕ್ರಮ: ಮೇ 20 ರಂದು

ಮೈಸೂರು, ಮೇ 10 : ರೋಟರಿ ಸಂಸ್ಥೆಯ ಮಹತ್ವ ಯೋಜನೆ ‘ದಿ ರೋಟರಿ ವಿದ್ಯಾನಿಧಿ ಟ್ರಸ್ಟ್’ ನ ನಿಧಿ ಸಂಗ್ರಹಕ್ಕಾಗಿ ನಗೆ ನಿಧಿ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಮೈಸೂರು ರಾಯಲ್ ನ ಮುಖ್ಯಸ್ಥ ಜಿ.ಕೆ.ಬಾಲಕೃಷ್ಣ ತಿಳಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮೇ 20ರಂದು ಸಂಜೆ 5.30ಕ್ಕೆ ಕಲಾಮಂದಿರದಲ್ಲಿ  ನಡೆಯುವ ಹಾಸ್ಯ ಸಂಜೆಯಲ್ಲಿ ಖ್ಯಾತ  ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ರಿಚರ್ಡ್ ಲೂಯಿಸ್ ಮತ್ತು ತಂಡದವರು ಹಾಗೂ ಪ್ರೊ.ಕೃಷ್ಣೇಗೌಡ  ಭಾಗವಹಿಸಲಿದ್ದಾರೆ ಎಂದರು.

ಟಿಕೆಟ್ ದೊರೆಯುವ ಸ್ಥಳ :  ಗೋಕುಲಂನ ಸಾಗಸ್ ಅಟೋಟೆಕ್, ಬೋಗಾದಿಯ ಸಾಗಸ್ ಗ್ಯಾಸ್ ಬಂಕ್, ದೇವರಾಜ ಅರಸ್ ರಸ್ತೆಯ ನಭ ಜ್ಯೂಯಲರಿ, ಹೋಟೆಲ್ ದಿವಾನ್ ರೆಸಿಡೆನ್ಸಿ, ಬನ್ನಿ ಮಂಟಪದ ಸ್ಟಾರ್ ಹೊಂಡೈ, ಕುವೆಂಪುನಗರದ ಕೆ.ಪಿ.ಆರ್. ಸುಜುಕಿ ಶೋ ರೂಂ ಹಾಗೂ ಲಕ್ಷ್ಮೀಪುರಂನ ಬದ್ರಿ ಬ್ಯಾಟರಿ ಸೇಲ್ಸ್ –ಸರ್ವೀಸ್ ನಲ್ಲಿ ಟಿಕೆಟ್ ಗಳು  ದೊರೆಯುತ್ತವೆ ಎಂದು  ಹೇಳಿದರು.

ದಿ ರೋಟರಿ ವಿದ್ಯಾನಿಧಿ ಟ್ರಸ್ಟ್ :  ಅಂತರರಾಷ್ಟ್ರೀಯ ಮಟ್ಟದ ರೋಟರಿ ಸಂಸ್ಥೆಯಿಂದ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು  ಮೈಸೂರು ಹಾಗೂ ಹೆಗ್ಗಡದೇವನಕೋಟೆಯ ರೋಟರಿ ಸಂಸ್ಥೆಗಳಿಂದ  ‘ದಿ ರೋಟರಿ ವಿದ್ಯಾನಿಧಿ ಟ್ರಸ್ಟ್’ ಎನ್ನುವ ವಿಶೇಷ ಯೋಜನೆಯನ್ನು ಕಳೆದ 6 ವರ್ಷಗಳಿಂದ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗಿದೆ.  ತಂದೆ ಇಲ್ಲದ ಅಥವಾ ದುಡಿಯುವ ಶಕ್ತಿಯನ್ನು ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳ ಮಕ್ಕಳಿಗೆ ಧನ ಸಹಾಯ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುವುದೇ  ಈ ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ಮೈಸೂರು ಹಾಗೂ ಹೆಗ್ಗಡದೇವನಕೋಟೆ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.  ಯೋಜನೆಗೆ 8 ಲಕ್ಷದವರೆಗೂ ವ್ಯಯ್ಯಿಸಲಾಗಿದ್ದು ಸುಮಾರು 120ಕ್ಕೂ ಅಧಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ ಎಂದು ಹೇಳಿದರು.

ರೋಟರಿ ಮೈಸೂರು ರಾಯಲ್ಸ್ ನ ಅಧ್ಯಕ್ಷ ಬಾಲಾಜಿ, ಕಾರ್ಯದರ್ಶಿ ದಯಾನಾಥ್, ನಾಗೇಂದ್ರ ಪ್ರಸಾದ್ ಹಾಗೂ ನಾಗೇಶ್ ಹನಸೋಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: