ಮೈಸೂರು

ಕ್ಲೋರಿನ್ ಅನಿಲ ಸೋರಿಕೆ : ಶಾಸಕ ನಾಗೇಂದ್ರ ಆಸ್ಪತ್ರೆಗೆ ಭೇಟಿ

ಮೈಸೂರು, ಮಾ.7:- ಇಂದು ಸಂಜೆ ಮೈಸೂರಿನ ರೈಲ್ವೆ ಕ್ಯಾಂಪಸಿನಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆಯಾಗಿ ಸುಮಾರು 40 ಜನರು ಅಸ್ವಸ್ಥಗೊಂಡಿದ್ದು ಅದರಲ್ಲಿ ಶಾಲಾ ಮಕ್ಕಳು ಸಹ ಸೇರಿದ್ದು ಸದ್ಯ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಸಕ ಎಲ್.ನಾಗೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ದೇವರ ಕೃಪೆಯಿಂದ ಹೆಚ್ಚಿನ ಅನಾಹುತವೇನೂ ಸಂಭವಿಸಿಲ್ಲ.  ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆಆರ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಅನಾಹುತದಿಂದ ಸಮಸ್ಯೆಗೆ ಈಡಾಗಿರುವವರ ಯೋಗಕ್ಷೇಮ ವಿಚಾರಿಸಿ ಸಂಬಂಧಿಕರಿಗೆ ಧೈರ್ಯ ಹೇಳಿ,ಅಸ್ವಸ್ಥಗೊಂಡಿರುವರನ್ನು ಜಾಗರೂಕತೆಯಿಂದ ಚಿಕಿತ್ಸೆ ಮಾಡಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

Leave a Reply

comments

Related Articles

error: