
ಮೈಸೂರು
ರಾಷ್ಟ್ರ, ಸಮಾಜ ನಿರ್ಮಾಣದಲ್ಲಿ ಮಹಿಳೆಯದ್ದು ಬಹುಮುಖ್ಯ ಪಾತ್ರ : ನವೀನ್ ಕುಮಾರ್
ಮೈಸೂರು,ಮಾ.8:- ಪ್ರತಿ ಮಹಿಳೆಯೂ ಈ ಸಮಾಜದ ಶಕ್ತಿ. ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯು ಬಹು ಮುಖ್ಯ ಪಾತ್ರವಹಿಸಿದ್ದಾಳೆ ಎಂದು ಮುಡಾ ಸದಸ್ಯರಾದ ನವೀನ್ ಕುಮಾರ್ ಹೇಳಿದರು
ಮೈಸೂರು ಯುವ ಬಳಗ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಂದು
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಕೊಲ್ಲಾಪುರದ ದೇವಸ್ಥಾನ ಆವರಣದಲ್ಲಿ
ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಮಾತನಾಡಿದರು.
ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಪ್ರತಿನಿಧಿಸುವ ಮೂಲಕ ಪುರುಷರಷ್ಟೇ ಸಮಾನಳು. ಸಾಧಿಸಿ ತೋರಿಸುತ್ತಿದ್ದಾಳೆ. ಗಡಿ ಕಾಯುವುದರಿಂದ ಹಿಡಿದು ಮನೆ ಕೆಲಸವನ್ನು ಅಚ್ಚು ಕಟ್ಟಾಗಿ ಅತ್ಯಂತ ಶ್ರದ್ಧೆಯಿ೦ದ ತಾಳ್ಮೆಯಿಂದ ಮಾಡುತ್ತಿದ್ದಾಳೆ. ಇಷ್ಟಾದರೂ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅಂತಹ ಮಹಿಳೆಯರ ರಕ್ಷಣೆಗೆ ನಿಲ್ಲಬೇಕು ಎಂದು ಹೇಳಿದರು.
ವಿವಿಧ ಕ್ಷೇತ್ರದ ಮಹಿಳಾ ಸಾಧಕರಾದ ಹರಿಕಥಾ ವಿದೂಷಿ ಡಾ ಮಾಲಿನಿ(ಸಂಗೀತ ಕ್ಷೇತ್ರ ),
ಪ್ರಮೀಳಾ ಕುನ್ವಾರ್ 2022 ಸಾಲಿನಲ್ಲಿ ಗಣರಾಜ್ಯೋತ್ಸವ ಕಾಮೆಂಟ್ ಆಫೀಸರ್ (ಕ್ರೀಡಾ ಕ್ಷೇತ್ರ ), ನೀಲಮ್ಮ ವಿದ್ಯಾರಣ್ಯಪುರಂ ಸ್ಮಶಾನದಲ್ಲಿ ಗುಂಡಿ ತೆಗೆದು ಕರ್ತವ್ಯ ನಿರ್ವಹಿಸುತ್ತಿರುವವರು (ಸಾಮಾಜಿಕ ಕ್ಷೇತ್ರ ),ಸುಧಾಮಣಿ ಮೂರ್ತಿ ಸಂಗೀತ ವಿದ್ವಾಂಸರು ಹಾಗೂ ಶಿಕ್ಷಕರು (ಸಂಗೀತ ಹಾಗೂ ಶಿಕ್ಷಣ ಕ್ಷೇತ್ರ ), ರೇವತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ (ಶಿಕ್ಷಣ ಕ್ಷೇತ್ರ ), ಸುಮಾ ರಾಜ್ ಕುಮಾರ್ ಮೈಸೂರಿನ ಪ್ರಥಮ ಮಹಿಳಾ ಮಾತನಾಡುವ ಗೊಂಬೆ ಮತ್ತು ಜಾದೂ ಕಲಾವಿದೆ (ಕಲಾ ಕ್ಷೇತ್ರ ), ರಚನಾ ಯೋಗ ಶಿಕ್ಷಕಿ ,ಸಾರ್ವಜನಿಕರಿಗೆ ಉಚಿತವಾಗಿ ಯೋಗ ತರಬೇತಿ ಕೊಡುವವರು (ಯೋಗ ಕ್ಷೇತ್ರ ) , ಶುಶ್ರೂಷಕರಾದ ಮಮತಾ (ಕೊರೋನಾ ವಾರಿಯರ್ )ಇವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು .
ಈ ಸಂದರ್ಭದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ ,ಲಕ್ಷ್ಮಿ ಶ್ರೀನಿವಾಸ್ ವಿಘ್ನೇಶ್ವರ ಭಟ್ , ಸುದರ್ಶನ್ ಪ್ರಮೋದ್, ಸಂಗೀತ ಪ್ರಸಾದ್ ,ಪ್ರತಾಪ್ ಸಿಂಗ್ ನವೀನ್, ಗೌರಿ ಸನತ್ ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)