ಮೈಸೂರು

ಅಹನಾ ಮೋಟಾರ್ಸ್ ನ ಮೂರನೆ ಶಾಖೆಯ ಉದ್ಘಾಟನೆ: ಮೇ 11 ರಂದು

ಮೈಸೂರು.ಮೇ.10 : ಯಮಹಾ ಶೋ ರೂಂನ ಮೂರನೇ ಶಾಖೆಯು ಕುವೆಂಪುನಗರದ ನ್ಯೂ ಕಾಂತರಾಜೇ ಅರಸ್ ರಸ್ತೆಯಲ್ಲಿ ಅಹನಾ ಆಟೋ ಮೊಬೈಲ್ಸ್ ಹೆಸರಿನಲ್ಲಿ ಮೇ 11ರಂದು ಬೆ.11 ಗಂಟೆಗೆ  ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ ಎಂದು ಅಹನಾ ಮೋಟಾರ್ಸ್ ನ ಮುಖ್ಯಸ್ಥ ದೀನಾ ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು,  ಯಮಹಾ ಮೋಟರ್ ನ ವಲಯಾಧ್ಯಕ್ಷ ರತೀಶ್ ಎಸ್. ನಾಯರ್ ಅಹನಾ ಆಟೋ ಮೊಬೈಲ್ಸ್ ನ ಉದ್ಘಾಟನೆ ಮಾಡಲಿದ್ದಾರೆ. ಸರ್ವೀಸ್ ಸೆಂಟರ್ ಹಾಗೂ ವಲಯ ಮಾರಾಟ ಮುಖ್ಯಸ್ಥ ಅನಿಲ್ ಚಂದನ್ ಸಿ.ಕೆ. ಬೆ.11.30 ಕ್ಕೆ ಆದಿಚುಂನಗಿರಿ ರಸ್ತೆಯಲ್ಲಿರುವ ಬಿಡಿ ಭಾಗಗಳ ವಿಭಾಗಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮೈನು ಕುಮಾರ್ ಹಾಗೂ ಯಮಹಾ ಸಂಸ್ಥೆಯ ಇಂದ್ರನೀಲ್ ದತ್ ಉಪಸ್ಥಿತರಿದ್ದರು. (ವರದಿ: ಕೆ.ಎಂ.ಆರ್,ಎಲ್.ಜಿ)

Leave a Reply

comments

Related Articles

error: