ಕರ್ನಾಟಕಪ್ರಮುಖ ಸುದ್ದಿಮೈಸೂರು

ಜೆ.ಡಿ.ಎಸ್ ಕಾರ್ಯಕರ್ತರ ಸಭೆಯಲ್ಲಿ ಗೊಂದಲ : ಜಿ.ಟಿ.ದೇವೇಗೌಡ-ಸಾ.ರಾ.ಮಹೇಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ

ಪ್ರಮುಖಸುದ್ದಿ, ರಾಜ್ಯ(ಮೈಸೂರು), ಮೇ.10:- ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾರಾ ಕನ್ವೆನ್ಷನ್ ಹಾಲ್ ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಶಾಸಕ ಜಿ.ಟಿ. ದೇವೇಗೌಡ ಹಾಗೂ ಶಾಸಕ ಸಾ.ರಾ. ಮಹೇಶ್ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.

ಸಭೆಯಲ್ಲಿ ಹುಣಸೂರು ಕ್ಷೇತ್ರದಿಂದ ಜಿ.ಟಿ. ದೇವೇಗೌಡರ ಕುಟುಂಬಕ್ಕೆ ಟಿಕೇಟ್ ನೀಡುವಂತೆ ಜಿಟಿಡಿ ಬೆಂಬಲಿಗರಿಂದ ಕುಮಾರಸ್ವಾಮಿಗಯವರಿಗೆ ಒತ್ತಾಯ ಹೇರಲಾಯಿತು. 9 ವರ್ಷಗಳಿಂದ ಕಾಂಗ್ರೆಸ್ ಶಾಸಕರಿದ್ದರೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದು ಜಿ.ಟಿ. ದೇವೇಗೌಡರು ಈಗ ಏಕಾಏಕಿ ಮಾಜಿ ಸಂಸದ ಎಚ್.ವಿಶ್ವನಾಥ್ ಅವರಿಗೆ ಟಿಕೇಟ್ ಕೊಟ್ಟರೆ ಹೇಗೆ? ಪಕ್ಷವನ್ನೇ ನಂಬಿದ್ದ ಜಿ.ಟಿ. ದೇವೇಗೌಡರ ಕುಟುಂಬ ಎಲ್ಲಿಗೆ ಹೋಗಬೇಕು ಎಂದು ಕುಮಾರಸ್ವಾಮಿಯವರನ್ನು  ಜಿ.ಟಿ.ದೇವೇಗೌಡ  ಬೆಂಬಲಿಗರು ಬಹಿರಂಗವಾಗಿ ಪ್ರಶ್ನಿಸಿದರು. ಮಧ್ಯೆ ಪ್ರವೇಶಿಸಿದ ಶಾಸಕ ಸಾ.ರಾ. ಮಹೇಶ್, ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಬೇಕೆಂದು ಸಲಹೆ ನೀಡಿದರು. ಈ ವೇಳೆ ಸಾರಾ ಮಹೇಶ್ ಮಾತಿಗೆ ಆಕ್ಷೇಪ ವ್ಯಕ್ತವಾಯಿತು, ಬೇರೆ ಕ್ಷೇತ್ರದ ಬಗ್ಗೆ ಏಕೆ ಮಾತನಾಡುತ್ತೀರಿ, ಪಕ್ಷದ ಬಗ್ಗೆ ಅಂತಹ ಅಭಿಮಾನವಿದ್ದರೆ ನಿಮ್ಮ ಕೆ.ಆರ್. ನಗರ ಕ್ಷೇತ್ರವನ್ನೇ ಬಿಟ್ಟು ಕೊಡಿ ಎಂದಾಗ ಸಭೆಯಲ್ಲಿ ಮತ್ತೆ ಗೊಂದಲ ಸೃಷ್ಟಿಯಾಯಿತು. ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಗುಂಪುಗಟ್ಟಿ ಕೈ ಕೈ ಮಿಲಾಯಿಸಲು ಮುಂದಾದಾಗ  ಮುಖಂಡರು ಮಧ್ಯೆ ಪ್ರವೇಶದಿಂದ ಪರಿಸ್ಥಿತಿಯನ್ನು  ಹತೋಟಿಗೆ ತಂದರು.- (ಎಸ್.ಎಚ್)

 

Leave a Reply

comments

Related Articles

error: