ನಮ್ಮೂರುಮೈಸೂರು

ಇಂಜಿನಿಯರಿಂಗ್ ವಿಟಿಯು ಪರೀಕ್ಷೆಯಲ್ಲಿ ವಿದ್ಯಾವರ್ಧಕ ಕಾಲೇಜಿನ ವಿದ್ಯಾರ್ಥಿನಿಯರು ರ್ಯಾಂಕ್

ಮೈಸೂರು,ಮಾ.9 : – ಇತ್ತೀಚೆಗಷ್ಟೇ ನಡೆದ ಇಂಜಿನಿಯರಿಂಗ್ ವಿಟಿಯು ಪರೀಕ್ಷೆಯಲ್ಲಿ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಮೂವರು ವಿದ್ಯಾರ್ಥಿನಿಯರು ರ್ಯಾಂಕ್ ಗಳಿಸಿದ್ದಾರೆ.

ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಸಾಯಿಶ್ರೀ ರೀನಾ ರೆಡ್ಡಿ ನಾಲ್ಕನೇ ರ್ಯಾಂಕ್, ಎಂಟೆಕ್ ನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಸೋನಿಯಾ ದಾಸ್ ನಾಲ್ಕನೇ ರ್ಯಾಂಕ್ ಮತ್ತು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮೃದುಲಾ ಚಂದ್ರಾಕರ್ ಹತ್ತನೇ ರ್ಯಾಂಕ್ ಗಳಿಸಿದ್ದಾರೆ.

ವಿದ್ಯಾವರ್ಧಕ ಸಂಘದ (ವಿವಿಎಸ್) ಆಡಳಿತ ಮಂಡಳಿ, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗಳಿಗಾಗಿ ಅಭಿನಂದಿಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: