ಕರ್ನಾಟಕಪ್ರಮುಖ ಸುದ್ದಿ

ಕಾವೇರಿ ಪರಿಣತರ ತಂಡ ರಚಿಸಲು ಕೇಂದ್ರದ ಪತ್ರ : ನಾರಿಮನ್ ಜೊತೆ ಚರ್ಚಿಸಲು ಸರ್ವಪಕ್ಷ ಸಭೆ ನಿರ್ಧಾರ

ಬೆಂಗಳೂರು (ಪ್ರಮುಖ ಸುದ್ದಿ) ಮೇ 10 :- ಕರ್ನಾಟಕ ವ್ಯಾಪ್ತಿಯ ಕಾವೇರಿ ಕೊಳ್ಳ ನಿರ್ವಹಣೆಗೆ ಪರಿಣತರ ತಂಡ ರಚಿಸುವ ಕುರಿತು ರಾಜ್ಯ ಸರ್ಕಾರವು ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅವರನ್ನು ಭೇಟಿ ಮಾಡಿ ಸಲಹೆ ಪಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ನಡೆದ ವಿಧಾನಮಂಡಲದ ಉಭಯ ಸದನಗಳ ಸರ್ವ ಪಕ್ಷ ನಾಯಕರ ಸಭೆ ಒಮ್ಮತದ ತೀರ್ಮಾನ ಕೈಗೊಂಡ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಈ ವಿಷಯ ತಿಳಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕಾನೂನು ತಜ್ಞರು, ಸದನ ನಾಯಕರು ಹಾಗೂ ಈ ವಿಷಯದಲ್ಲಿ  ಹೆಚ್ಚಿನ ತಿಳಿವಳಿಕೆ ಇರುವ ಎಚ್‌.ಡಿ. ದೇವೇಗೌಡರ ಸಲಹೆ ಆಧರಿಸಿ ಮುಂದಿನ ಹೆಜ್ಜೆ ಇಡಲಾಗುವುದು” ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಮಾತನಾಡಿ, “ರಾಜ್ಯದ ಪರ ವಕೀಲ ಪಾಲಿ ನಾರಿಮನ್ ಅವರನ್ನು ಭೇಟಿ ಮಾಡಿ ರಾಜ್ಯದ ನಿಯೋಗ ಚರ್ಚಿಸಲಿದೆ. ಆ ಬಳಿಕ ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿದೆ. ಪರಿಣತರ ತಂಡ ರಚಿಸುವ ಬಗ್ಗೆ ರಾಜ್ಯದ ಅಭಿಪ್ರಾಯ ಅಥವಾ ಒಪ್ಪಿಗೆ ನೀಡುವಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಪತ್ರ ಬರೆದಿತ್ತು. ನಾರಿಮನ್‌ ಅವರನ್ನು ಮುಂದಿನ ವಾರ ಭೇಟಿ ಮಾಡಿ ಚರ್ಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಸರ್ಕಾರ ನಂತರ ಸೂಕ್ತ ನಿಲುವು ತೆಗೆದುಕೊಳ್ಳಲಿದೆ. ಪರಿಣತರ ತಂಡ ರಚನೆಯಿಂದಾಗುವ ಸಾಧಕ– ಬಾಧಕ, ಇದರಿಂದ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಮೇಲೆ ಆಗಲಿರುವ ಪರಿಣಾಮದ  ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ವಿವರಿಸಿದರು.

-ಎನ್.ಬಿ.ಎನ್

Leave a Reply

comments

Related Articles

error: