ಮೈಸೂರು

ಕಿಡ್ನಿ ಸಮಸ್ಯೆ : ಆರ್ಥಿಕವಾಗಿ ಸ್ಪಂದಿಸಿದ ಸಂಸದರು

ಮೈಸೂರು, ಮಾ.11:- ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಾಜು.ಎಸ್ ಬಿನ್ ಸಿದ್ದರಾಜು(25),   ಮೈಸೂರು ನಗರದ ನಿವಾಸಿಯಾದ ಇವರು ಅನಾರೋಗ್ಯದಿಂದ ಬಳಲುತ್ತಿದ್ದು, ಆರ್ಥಿಕವಾಗಿ ತೊಂದರೆಯಲ್ಲಿದ್ದರು. ಅವರ ಚಿಕಿತ್ಸೆಗೆ ಸಂಸದ ಪ್ರತಾಪ್ ಸಿಂಹ ಸ್ಪಂದಿಸಿದ್ದಾರೆ.

ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಕುಟುಂಬದವರು ಆರ್ಥಿಕವಾಗಿ ತೊಂದರೆಯಲ್ಲಿದ್ದು, ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ  ಪ್ರತಾಪ್ ಸಿಂಹ ಅವರಲ್ಲಿ ಮೊರೆ ಹೋಗಿದ್ದರು. ಇದಕ್ಕೆ ಕೂಡಲೆ ಸ್ಪಂದಿಸಿದ ಸಂಸದರು ಅವರ ಚಿಕಿತ್ಸಗೆ ತಗಲುವ ಅಂದಾಜು ಮೊತ್ತ ರೂ.2,75,000/-ಗಳನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಪರಿಹಾರ ನಿಧಿಯಡಿ (PMNRF)ಬಿಡುಗಡೆ ಮಾಡಿಸಿದ್ದಾರೆ.  ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ. (ಕೆ.ಎಸ್,ಎಸ್. ಎಚ್)

 

Leave a Reply

comments

Related Articles

error: