
ಕರ್ನಾಟಕಪ್ರಮುಖ ಸುದ್ದಿ
ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ 18 ವರ್ಷದ ಯುವತಿ ಸಾವು
ರಾಜ್ಯ(ಕಲಬುರಗಿ),ಮಾ.14 :- ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ 18 ವರ್ಷದ ಯುವತಿ ದುರಂತ ಅಂತ್ಯ ಕಂಡ ಘಟನೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಸಂಭವಿಸಿದೆ.
ಶೀಲವಂತಿ ಅಂಬಣ್ಣ ಸಾಲಿ(18) ಮೃತ ದುರ್ದೈವಿ. ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷ ಓದುತ್ತಿದ್ದ ಈಕೆ, ಭಾನುವಾರ ಕಾಲೇಜಿಗೆ ರಜೆ ಇದ್ದ ಕಾರಣ ಪಾಲಕರ ಜತೆ ಜಮೀನಿಗೆ ಹೋಗಿದ್ದಳು. ಓಕ್ಕಣೆ ಕಣದಲ್ಲಿ ಗೋಧಿ ರಾಶಿ ಮಾಡಲಾಗುತ್ತಿತ್ತು.
ರಾಶಿ ಮಾಡುವ ಯಂತ್ರದ ಬಳಿಯೇ ಶೀಲವಂತಿ ಅಂಬಣ್ಣ ಸಾಲಿ ನಿಂತಿದ್ದಳು. ಯಂತ್ರದ ಬಳಿ ಗೋಧಿಯ ಸೂಡು ಎತ್ತಿಕೊಡುವಾಗ ಕೊರಳಿನ ವೇಲ್ ಯಂತ್ರದ ಬೆಲ್ಟ್ ಗೆ ಸಿಲುಕಿ, ಕ್ಷಣಾರ್ಧದಲ್ಲೇ ತನ್ನೊಳಗೆ ಎಳೆದುಕೊಂಡಿತು, ತಲೆ, ಮುಖಕ್ಕೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಏಕೈಕ ಮಗಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.(ಎಸ್.ಎಂ)