Uncategorizedಮೈಸೂರು

ಯಂತ್ರ ಮಾನವರಿಗೆ ಬುದ್ಧ, ಬಸವ ಮನೋವಿಜ್ಞಾನಿಗಳು: ಆರ್.ಸದಾನಂದ

ಮೈಸೂರು, ಮೇ ೧೦: ಇತ್ತೀಚಿನ ದಿನಗಳಲ್ಲಿ ಮಾನವ ತಂತ್ರಜ್ಞಾನದ ದಾಸರಾಗಿ ಯಂತ್ರ ಮಾನವನಾಗುತ್ತಿರುವ ಸಂದರ್ಭದಲ್ಲಿ ಬುದ್ಧ, ಬಸವಣ್ಣ ಹೆಚ್ಚು ಪ್ರಸ್ತುತವಾಗುತ್ತಾರಲ್ಲದೆ ಮನೋವಿಜ್ಞಾನಿಗಳಾಗಿ ನಿಲ್ಲುತ್ತಾರೆ ಎಂದು ಚಿಂತಕ ಆರ್.ಸದಾನಂದ ಅಭಿಪ್ರಾಯಪಟ್ಟರು.
ಬುಧವಾರ ಮಾನಸಗಂಗೋತ್ರಿ ಇತಿಹಾಸ ಅಧ್ಯಯನ ವಿಭಾಗದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವಣ್ಣ, ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಮ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಬುದ್ಧ ಹಾಗೂ ಬಸವಣ್ಣ ಹೆಚ್ಚೆಚ್ಚು ಕಾಡುತ್ತಾರೆ. ಅವರ ತತ್ವಾದರ್ಶಗಳು ಜಗತ್ತನ್ನು ಶಾಂತಿಯ ಕಡೆ ಕೊಂಡೊಯ್ಯಲಿದ್ದು, ಪ್ರತಿಯೊಬ್ಬರು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಅಂದಿನ ಕಾಲಘಟ್ಟದಲ್ಲೇ ಅವರು ಸಮತಾ ಸಮಾಜ ನಿರ್ಮಾಣಕ್ಕೆ ಹೋರಾಡಿದರು. ಇಂದು ಅಂತಹ ಮಹಾನ್ ನಾಯಕರ ಅಗತ್ಯತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗ ಪ್ರಾಧ್ಯಾಪಕಿ ಪ್ರೊ.ಬಿ.ಕೆ.ತುಳಸಿಮಾಲ, ಮಹಾರಾಣಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಡಾ.ಬಿ.ವಿ.ವಸಂತಕುಮಾರ್, ಇತಿಹಾಸ ಅಧ್ಯಯನ ವಿಭಾಗ ಅಧ್ಯಕ್ಷ ಡಾ.ಕೆ.ಸದಾಶಿವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: