ಮೈಸೂರು

ಗೊಂದಲದ ಗೂಡಾದ ಹಾಫ್ ಮ್ಯಾರಥಾನ್: ಸಚಿವರ ಅಸಮಾಧಾನ

marathan-webದಸರಾ ಕ್ರೀಡಾ ಉಪಸಮಿತಿ ವತಿಯಿಂದ ನಡೆಸಲಾದ ಹಾಫ್ ಮ್ಯಾರಥಾನ್ ಆಯೋಜಕರ ಇರುಸು-ಮುರುಸಿಗೆ ಕಾರಣವಾಯಿತು. ಊಹಿಸದಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡ ಕಾರಣ ಟೀ ಶರ್ಟ್ ಬಂದವರಿಗೆಲ್ಲ ವಿತರಿಸಲು ಸಾಧ್ಯವಾಗಲಿಲ್ಲ. ಟಿಶರ್ಟ್ ಪಡೆಯಲು ತಾಮುಂದು ತಾಮುಂದು ಎಂದು ನೂಕಾಟ ನಡೆಸಿದ್ದರ ಪರಿಣಾಮ ಕೆಲವು ಕಾಲ ಸ್ಥಳದಲ್ಲಿ  ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇವೆಲ್ಲದರ ನಡುವೆಯೇ ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಿಂದ ಕ್ರೀಡಾ ಮತ್ತು ಯುವಜನ ಕ್ರೀಡಾ ಇಲಾಖೆ ಆಯೋಜಿಸಿದ್ದ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್  ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನೂಕುನುಗ್ಗಲನ್ನು ವೀಕ್ಷಿಸಿದ ಸಚಿವರು ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹಾಫ್ ಮ್ಯಾರಥಾನ್ ನಲ್ಲಿ ಸಹಸ್ರಾರು ಓಟಗಾರರು ಪಾಲ್ಗೊಂಡಿದ್ದರು. 21ಕಿ.ಮೀ, 8ಕಿ.ಮೀ, 5ಕಿ.ಮೀ ಹಾಗೂ 3ಕಿಮೀವಿಭಾಗದಲ್ಲಿ ಹಾಫ್ ಮ್ಯಾರಥಾನ್ ನಡೆಯಿತು. ಮಕ್ಕಳು, ವಯಸ್ಕರು ಇದರಲ್ಲಿ ಪಾಲ್ಗೊಂಡಿದ್ದರು. ಡಿಜಿ ಮ್ಯೂಸಿಕ್ ನೊಂದಿಗೆ ಓಟ ನಡೆಯಿತು.

ಸಚಿವ ಪ್ರಮೋದ್ ಮಧ್ವರಾಜ ಅವರಿಗೆ ಪೊಲೀಸ್ ಆಯುಕ್ತ ಬಿ.ದಯಾನಂದ್ ಸಾಥ್ ನೀಡಿದರು.

Leave a Reply

comments

Related Articles

error: