ಮೈಸೂರು

ಸಾರ್ವಜನಿಕರಿಗೆ ನಂದಿನಿ ಹಾಲು ನೀಡುವ ಮೂಲಕ ನಟ ಪುನೀತ್ ರಾಜಕುಮಾರ್ ಜನ್ಮದಿನ ಆಚರಿಸಿದ ಅಭಿಮಾನಿ ಬಳಗ

ಮೈಸೂರು,ಮಾ.17:-  ನಟ ದಿ. ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ನಟ ಡಾ.ಪುನೀತ್ ರಾಜ್ ಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ ನಂಜುಮಳಿಗೆ ವೃತ್ತದಲ್ಲಿ  ಸಾರ್ವಜನಿಕರಿಗೆ ನಂದಿನಿ ಹಾಲಿನ ಪ್ಯಾಕೆಟ್ ನೀಡುವ ಮೂಲಕ ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಗಂಗಾಧರ್ ಮಾತನಾಡಿ  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ರೈತರ ಹಿತದೃಷ್ಟಿಯಿಂದ ಹಾಗೂ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ ಹಾಲು ಉತ್ಪಾದಕರ ಮಾರಾಟದ ಕೆಲವು ಪದಾರ್ಥಗಳಾದ ಹಾಲು, ಮೊಸರು, ಲಸ್ಸಿ, ಪೇಡ ಮುಂತಾದ ಪದಾರ್ಥಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಪುನೀತ್ ರಾಜ ಕುಮಾರ್ ಅವರು ತಂದೆ ಡಾ.ರಾಜಕುಮಾರ ಅವರ ಮಾದರಿಯನ್ನೇ ಅನುಸರಿಸಿದರು, ಅವರ ನಿರಂತರ ಚಲನಚಿತ್ರೋದ್ಯಮದ ನಡುವೆಯೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಈ ದೇಶಕ್ಕೆ ಮಾದರಿಯಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಡಾಕ್ಟರೇಟ್ ಗೌರವ ನೀಡಿ ಅವರಿಗೆ ಸರ್ಕಾರಿ ಗೌರವವನ್ನು ನೀಡಿದೆ.
ಇಂದಿನ ಯುವಕರು ಅವರ ಮಾರ್ಗದರ್ಶನದಂತೆ ದೇಹದಾನ, ರಕ್ತದಾನ, ನೇತ್ರದಾನ, ಮಾಡುವುದರ ಮೂಲಕ  ಆದರ್ಶ ಮೆರೆಯಲಿ. ಅವರ ಹುಟ್ಟುಹಬ್ಬವನ್ನು ಸಾಮಾಜಿಕ ಸೇವೆ ಮಾಡುವುದರ ಮೂಲಕ ಆಚರಣೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಡಾ ಸದಸ್ಯರಾದ ಲಕ್ಷ್ಮೀದೇವಿ ,ಹಿಂದುಳಿದ ವರ್ಗದ ಅಧ್ಯಕ್ಷರಾದ ಜೋಗಿ ಮಂಜು , ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಲೋಹಿತ್ ,ತೀರ್ಥಕುಮಾರ್ ,ಶಿವು,ಸೂರಜ್ ,ದಾಸಪ್ಪ ,ವೆಂಕಟೇಶ್   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: