ಮೈಸೂರು

ಸೆಲ್ಪಿ ತೆಗೆಯಲು ಹೋಗಿ ನದಿಗೆ ಬಿದ್ದು ಸಾವು

ಮೈಸೂರು,ಮೇ.10:- ಸೆಲ್ಪಿ ತೆಗಿಯಲು ಹೋದ ವೇಳೆ ಕಾಲುಜಾರಿ ನದಿಗೆ ಬಿದ್ದು ಓರ್ವ ಸಾವನ್ನಪ್ಪಿದ ಘಟನೆ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆದಿದೆ.
ಮೃತನನ್ನು ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕುಮಾರ್( 37) ಎಂದು ಗುರುತಿಸಲಾಗಿದೆ. ಹೆಂಡತಿ ರೂಪ ಮತ್ತು ಮಗನ ಜೊತೆ ಇಲ್ಲಿನ ಶ್ರೀರಾಮ ದೇವಾಲಯಕ್ಕೆ ಪೂಜೆ ಸಲ್ಲಿಸಿ ನಂತರ ಕಾವೇರಿ ನದಿ ಜಲಪಾತದ ಬಳಿ ಸೆಲ್ಪಿ ತೆಗಿಯಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. – (ವರದಿ:ಎಸ್.ಎನ್,ಎಸ್.ಎಚ್)

Leave a Reply

comments

Related Articles

error: