
ದೇಶಪ್ರಮುಖ ಸುದ್ದಿಮನರಂಜನೆ
‘ದಿ ಕಾಶ್ಮೀರ ಫೈಲ್ಸ್’ ಮೇಲೆ ಪ್ರಕಾಶ್ ರಾಜ್ ಟ್ವೀಟ್ ; ಪರ-ವಿರೋಧ ಚರ್ಚೆಗೆ ಗ್ರಾಸವಾಗಿರುವ ಟ್ವೀಟ್
ದೇಶ(ನವದೆಹಲಿ),ಮಾ.19 : ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ಭರ್ಜರಿ ಪ್ರದರ್ಶನದೊಂದಿಗೆ ವ್ಯಾಪಕ ಚರ್ಚೆಗೂ ಕಾರಣವಾಗುತ್ತಿದೆ.1990 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಕುರಿತ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ. ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾವನ್ನು ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಿನಿಮಾವನ್ನು ಟೀಕೆ ಮಾಡಿದ್ದಾರೆ. ಈ ಸಾಲಿಗೆ ನಟ ಹಾಗೂ ರಾಜಕಾರಣಿ ಪ್ರಕಾಶ್ ರಾಜ್ ಕೂಡ ಸೇರಿಕೊಂಡಿದ್ದಾರೆ.
ಪ್ರಕಾಶ ರಾಜ್ ಅವರು ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ಮೇಲೆ ಮಾಡಿರುವ ಟ್ವೀಟ್ ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಅಷ್ಟುಕ್ಕೂ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಏನು ಅಂದರೆ, ಕಾಶ್ಮೀರ ಫೈಲ್ಸ್ ಚಿತ್ರವು ಹಳೆಯ ಗಾಯಗಳನ್ನು ವಾಸಿಮಾಡುತ್ತದೆಯೇ.? ಅಥವಾ ಇದು ಹೆಚ್ಚು ಪ್ರಚೋದನಕಾರಿಯಾಗಿ ಮಾಡುತ್ತದೆಯೇ.? ಅಥವಾ ದ್ವೇಷದ ಬೀಜಗಳನ್ನು ಬಿತ್ತುವುದೇ.? ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಜತೆಗೆ ಕಾಶ್ಮೀರ ಫೈಲ್ಸ್ ಚಿತ್ರ ವಿಕ್ಷಣೆ ಬಳಿಕ ಚಿತ್ರಮಂದಿರದಲ್ಲಿ ವ್ಯಕ್ತಿಯೋರ್ವ ವೀಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ದೃಶ್ಯವಿದೆ, ಇದೀಗ ಪ್ರಕಾಶ್ ರಾಜ್ ಟ್ವೀಟ್ ಹಾಟ್ ಟಾಪಿಕ್ ಆಗಿದೆ.(ಎಸ್.ಎಂ)