
ಕರ್ನಾಟಕಪ್ರಮುಖ ಸುದ್ದಿ
ಕುಮಟಾ : ಪ್ರವಾಸಕ್ಕೆ ಬಂದಿದ್ದ ಇಬ್ಬರು ಸಮುದ್ರಪಾಲು
ಪ್ರಮುಖಸುದ್ದಿ, ರಾಜ್ಯ (ಕಾರವಾರ) ಮೇ.10:- ಪ್ರವಾಸಕ್ಕೆ ಬಂದಿದ್ದ ಇಬ್ಬರು ಸಮುದ್ರಪಾಲಾಗಿದ್ದು, ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ಕುಮಟಾ ಹೆಡ್ ಬಂದರ್ ನಲ್ಲಿ ನಡೆದಿದೆ.
ಮೃತರನ್ನು ಹಳಿಯಾಳದ ಪ್ರಾಂಕ್ಲಿನ್ (25), ಪ್ರಜ್ವಲ್ (26)ಎಂದು ಹೇಳಲಾಗಿದೆ. ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಹಳಿಯಾಳದ ಸೆಂಟ್ ಮಿಲಾಗ್ರೀಸ್ ಅಸೋಸಿಯೇಶನ್ ಐದು ಮಂದಿ ಸದಸ್ಯರು ಕುಮಟಾದ ಹೆಡ್ ಬಂದರ್ ಬಳಿ ಪ್ರವಾಸಕ್ಕೆಂದು ಬಂದಿದ್ದರು.ಸಮುದ್ರಕ್ಕೆ ಈಜಲು ನೀರಿಗಿಳಿದಾಗ ದುರ್ಘಟನೆ ಸಂಭವಿಸಿದೆ. ಕುಮಟಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.ನೀರು ಪಾಲಾದವರಿಗಾಗಿ ಮೀನುಗಾರರಿಂದ ಶೋಧ ನಡೆದಿದೆ.