ದೇಶಪ್ರಮುಖ ಸುದ್ದಿ

ಮೂರು ತಿಂಗಳಿಗೊಮ್ಮೆ ಉಡಾನ್ ವಿಮಾನ ಟಿಕೆಟ್ ದರ ಪರಿಷ್ಕರಣೆ

ದೇಶ (ಪ್ರಮುಖ ಸುದ್ದಿ) ನವದೆಹಲಿ, ಮೇ 11:- ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ದೇಶದ 2 ಮತ್ತು 3 ನೇ ಹಂತದ ನಗರಗಳಿಗೆ ವಿಮಾನಯಾನ ಕಲ್ಪಿಸುವ “ಉಡಾನ್” ಯೋಜನೆಯ ವಿಮಾನ ಪ್ರಯಾಣ ದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುವುದು ಎಂದು. ಕೇಂದ್ರ ವಿಮಾನಯಾನ ಇಲಾಖೆ ಹೇಳಿದೆ.

ದೇಶದಲ್ಲಿನ ಹಣದುಬ್ಬರದ ಆಧಾರದಲ್ಲಿ ಈ ಟಿಕೆಟ್ ಬೆಲೆಗಳನ್ನು ಪರಿಷ್ಕರಣೆಗೊಳಿಸಲಾಗುವುದು ಎಂದ ಕೇಂದ್ರ ನಾಗರಿಕ ವಿಮಾನ ಯಾನ ಇಲಾಖೆ ಹೇಳಿದೆ. ಜನಸಾಮಾನ್ಯರಿಗೂ ವಿಮಾನಯಾನ ಅವಕಾಶ ಕಲ್ಪಿಸುವ ಸದುದ್ದೇಶದೊಂದಿಗೆ ಕೇಂದ್ರ ಸರ್ಕಾರವು ಕಳೆದ ತಿಂಗಳು ಈ ಯೋಜನೆ ಆರಂಭಿಸಿದೆ. ವಯಾಬಿಲಿಟಿ ಗ್ಯಾಪ್ ಫಂಡಿಂಗ್ ಮೇಲೆ ಹಣದುಬ್ಬರದ ಪರಿಣಾಮಗಳನ್ನು ಆಧರಿಸಿ ಟಿಕೆಟ್ ಬೆಲೆ ಪರಿಷ್ಕರಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಈ ಯೋಜನೆ ಅಡಿಯಲ್ಲಿ ಕರ್ನಾಟಕದ ನಾಲ್ಕು ನಗರಗಳಿಗೆ ವಿಮಾನ ಯಾನ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಅಸ್ತು ಎಂದಿದೆ. ಮೈಸೂರು, ಬೀದರ್, ಹುಬ್ಬಳ್ಳಿ ಮತ್ತು ಬಳ್ಳಾರಿ ಸಮೀಪದ ವಿದ್ಯಾನಗರ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ದೇಶೀಯ ವಿಮಾನಯಾನ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ.

-ಎನ್.ಬಿ.ಎನ್.

Leave a Reply

comments

Related Articles

error: