ಮೈಸೂರು

ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆಗೈದ ಕಿರಾತಕ ಪತಿ

ಮೈಸೂರು,ಮಾ.21:- ಏಳು ತಿಂಗಳ ಗರ್ಭಿಣಿ ಪತ್ನಿಯನ್ನೇ ಪತಿ ಮಹಾಶಯನೋರ್ವ ಕೊಲೆಗೈದು ಕೆರೆಯಲ್ಲಿ ಬಿಸಾಡಿದ ಘಟನೆ ಮೈಸೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತಳನ್ನು ಇಲವಾಲ ನಿವಾಸಿ ಅಶ್ವಿನಿ ಎಂದು ಹೇಳಲಾಗಿದೆ. ಈಕೆ ಇಲವಾಲ ನಿವಾಸಿ ಕಾರು ಚಾಲಕ ಪ್ರವೀಣ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. ಅಶ್ವಿನಿ ಏಳು ತಿಂಗಳ   ಗರ್ಭಿಣಿಯೂ ಆಗಿದ್ದಳು. ಗಂಡ-ಹೆಂಡತಿಯ ನಡುವೆ ಆಗಾಗ ಮನಸ್ತಾಪಗಳು ನಡೆಯುತ್ತಲೇ ಇತ್ತು. ಆದರೆ ಶನಿವಾರ ಜಗಳ ತಾರಕ್ಕೇರಿದ್ದು,  ಪ್ರವೀಣ್ ಕಪಾಲಕ್ಕೆ ಬಾರಿಸಿದ್ದಾನೆ. ಇದರಿಂದ ಪತ್ನಿ ಅಶ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಆಕೆಯ ಮೃತದೇಹವನ್ನು ಕಾರಿನಲ್ಲಿ ತಂದು ಬೆಳವಾಡಿ ಕೆರೆಯಲ್ಲಿ ಬಿಸಾಡಿದ್ದ ಎನ್ನಲಾಗಿದೆ. ಏತನ್ಮಧ್ಯೆ ಅಶ್ವಿನಿ ಪೋಷಕರು ತಮ್ಮ ಮಗಳು ಕಾಣಿಸುತ್ತಿಲ್ಲವೆಂದು  ವಿಜಯನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ವಿಚಾರಣೆಗಿಳಿದ ಪೊಲೀಸರು ಪ್ರವೀಣ್ ನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಉಳಿಗಾಲವಿಲ್ಲವೆಂದು ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ವಿಜಯನಗರ ಠಾಣಾ ಇನ್ಸಪೆಕ್ಟರ್ ಬಾಲಕೃಷ್ಣ, ಸಬ್ ಇನ್ಸಪೆಕ್ಟರ್ ಗಳಾದ  ಶಬರೀಶ್ ಗೌಡ ಮತ್ತು  ಇಂದ್ರಮ್ಮ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿ ಪ್ರವೀಣ್ ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: