ಮೈಸೂರು

ನಟ ದಿ. ಪುನೀತ್‌ ರಾಜಕುಮಾರ್ ಗೆ ಗೌರವ ಡಾಕ್ಟರೇಟ್ ನೀಡಿರುವುದು ಸ್ವಾಗತಾರ್ಹ: ಬಸವರಾಜ್ ಬಸಪ್ಪ

ಮೈಸೂರು,ಮಾ.22:-  ನಟ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಇಂದು ಮೈಸೂರು ವಿವಿಯಲ್ಲಿ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿದ ಹಿನ್ನೆಲೆಯಲ್ಲಿ ಡಾ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಚಾಮರಾಜ ಜೋಡಿರಸ್ತೆಯಲ್ಲಿರುವ ಗಾಯತ್ರಿ ಚಿತ್ರಮಂದಿರ ಮುಂಭಾಗ ಮೈಸೂರ್ ಪಾಕ್ ವಿತರಿಸಲಾಯಿತು.
ನಂತರ ಮಾತನಾಡಿದ ಕೆಆರ್ ಎಸ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ
ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವ ಸಂದರ್ಭದಲ್ಲಿ, ಸಮಾರಂಭದಲ್ಲಿ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರೋದು ಸ್ವಾಗತಾರ್ಹ. ಇದಕ್ಕೆ ಕಾರಣರಾದ ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತಕುಮಾರ್‌, ರಿಜಿಸ್ಟಾರ್‌ ಪ್ರೊ ಆರ್‌. ಶಿವಪ್ಪ ಪರೀಕ್ಷಾಂಗ ಕುಲಸಚಿವ ಪ್ರೊ. ಎ.ಪಿ. ಜ್ಞಾನಪ್ರಕಾಶ್, ಆಡಳಿತ ಮಂಡಳಿ, ವ್ಯವಸ್ಥಾಪನಾ ಮಂಡಳಿ ಸದಸ್ಯರು, ಸಿಂಡಿಕೇಟ್ ಸದಸ್ಯರು, ವಿವಿ ಸಿಬ್ಬಂದಿಗೆ ಹೃತೂರ್ವಕ  ಧನ್ಯವಾದಗಳನ್ನು ತಿಳಿಸಿದರು.
ರಾಜ್ ಕುಮಾರ್ ಅಭಿಮಾನಿ ಬಳಗದ ಮೈಸೂರು ಜಿಲ್ಲಾಧ್ಯಕ್ಷ ದೇಸಿ ಗೌಡ ಮಾತನಾಡಿ
ಅತ್ಯುತ್ತಮ ಕಲಾವಿದ, ಮಾನವೀಯ ಗುಣ ಮೌಲ್ಯವುಳ್ಳ ಸಮಾಜ ಸೇವಕ ಪುನೀತರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ಮೈಸೂರು ವಿವಿ  ಪ್ರಶಂಸನೀಯ, ಜನ ಮೆಚ್ಚುಗೆಯ ಕಾರ್ಯ ಮಾಡುತ್ತಿದೆ. ಪುನೀತ್‌  ಅವರ ಪತ್ನಿ  ಅಶ್ವಿನಿ ಪುನೀತ್ ರಾಜ್ ಕುಮಾರ್‌ ಅವರು ಕೂಡ ಗೌರವ ಸ್ವೀಕರಿಸಲು ಒಪ್ಪಿ, ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದಿರುವುದು ಅವರಿಗೆ ಹೃತೂರ್ವಕ ಸ್ವಾಗತವನ್ನು ಮೈಸೂರಿಗರ ಪರವಾಗಿ ಕೋರಲು ಇಚ್ಛಿಸುತ್ತೇನೆ ಎಂದರು.

ಈ ಸಂದರ್ಭ ಡಾ. ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ  ವಿಶ್ವಮಾನವ ರಾಜ ಕುಮಾರ್ ಅಭಿಮಾನಿ ಬಳಗದ ಉಪಾಧ್ಯಕ್ಷರಾದ ರಮೇಶ್ ,ಕಾರ್ಯದರ್ಶಿ ಸುಚೇಂದ್ರ , ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ,ಎಸ್ ಎನ್ ರಾಜೇಶ್ ,ಸುರೇಶ್ ,ರಾಕೇಶ್ ಕುಂಚಿಟಿಗ ,ಮನು, ಚಿದಾನಂದಮೂರ್ತಿ   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: