ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ನ ಬರ್ಬರ ಹತ್ಯೆ

ರಾಜ್ಯ, (ಬೆಂಗಳೂರು) ಮೇ 11 :  ಕುಂದಾಪುರ ಮೂಲದ ಗೋಲ್ಡನ್ ಸುರೇಶ್ ಎಂಬ ರಿಯಲ್ ಎಸ್ಟೇಟ್ ಏಜೆಂಟ್‍ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಯನಗರದ ಜೆಎಸ್‍ಎಸ್ ಸರ್ಕಲ್‍ನಲ್ಲಿರುವ ಅಪಾರ್ಟ್‍ಮೆಂಟ್‍ವೊಂದರಲ್ಲಿ ಕೋಟೇಶ್ವರ ಮೂಲದ 38 ವರ್ಷದ ಸುರೇಶ್ ಪೂಜಾರಿಯನ್ನು ಹತ್ಯೆ ಮಾಡಲಾಗಿದೆ.

ಮೊನ್ನೆ ರಾತ್ರಿ ಅಪಾರ್ಟ್‍ಮೆಂಟ್‍ನಲ್ಲಿ ಪಾರ್ಟಿ ಮಾಡಿದ ನಂತರ ಸುರೇಶ್ ನ ಕತ್ತು ಕತ್ತರಿಸಿ ಕೊಲೆಗೈದು ಗೋಣಿ ಚೀಲದಲ್ಲಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ರಾತ್ರಿ ಪಾರ್ಟಿ ಮಾಡಿದ್ದ ಸ್ನೇಹಿತರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

ಸ್ನೇಹಿತ ರಾಕೇಶ್ ಹಾಗೂ ಸುರೇಶ್ ನಡುವೆ ಹಣಕಾಸು ವಿಚಾರವಾಗಿ ತಗಾದೆ ಉಂಟಾಗಿತ್ತು. ಕಳೆದ ಒಂದು ವರ್ಷದಿಂದ ಸುರೇಶ್ ಇಲ್ಲಿಯೇ ವಾಸವಾಗಿದ್ದರು. ಈತ ಅಪರಾಧ ಹಿನ್ನೆಲೆ ಹೊಂದಿದ್ದು ಉಡುಪಿ, ಕುಂದಾಪುರ ಸೇರಿ ವಿವಿಧೆಡೆಗಳಲ್ಲಿ 18 ಕೇಸ್‍ಗಳು ದಾಖಲಾಗಿದ್ದವು. 2008ರಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ನುಗ್ಗಿ ಠಾಣಾಧಿಕಾರಿ ಸತೀಶ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪ ಕೂಡ ಸುರೇಶ್ ವಿರುದ್ಧ ಕೇಳಿ ಬಂದಿತ್ತು. (ವರದಿ: ಕೆ.ಎಸ್, ಎಲ್.ಜಿ)

Leave a Reply

comments

Related Articles

error: