ಕರ್ನಾಟಕಪ್ರಮುಖ ಸುದ್ದಿ

ಪಲ್ಸ್ ವರ್ಡ್ಸ್ ಕಂಪನಿಯಿಂದ ಜನರಿಗೆ ಹಣದ ಮೋಸ : ಮ್ಯಾನೇಜರ್ ಬಂಧನ, ಮಾಲೀಕನಿಗೆ ಬಲೆ ಬೀಸಿರುವ ಬಳ್ಳಾರಿ ಪೋಲೀಸ್

ರಾಜ್ಯ(ಬಳ್ಳಾರಿ),ಮಾ.23 : ಬಳ್ಳಾರಿ ನಗರದ ಪಲ್ಸ್ ವರ್ಡ್ಸ್ ಕಂಪನಿ ವಿರುದ್ಧ ಸಾರ್ವಜನಿಕರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮ್ಯಾನೇಜರ್ ರವೀಂದ್ರ ಬಾಬು ಅಲಿಯಾಸ್ ಕುಮಾರ್ ಎನ್ನುವ ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅದು ದುಪಟ್ಟು ಸಿಗುತ್ತದೆ ಎಂದು ಬಳ್ಳಾರಿಯ ಜನರು ಲಾಭ ಪಡೆಯುವ ಸಲುವಾಗಿ ಹಣ ಹೂಡಿಕೆ ಮಾಡಿದ್ದಾರೆ. 300ಕ್ಕೂ ಹೆಚ್ಚು ಜನರು ಹಣ ಹೂಡಿಕೆ ಮಾಡಿದ್ದು,  ನಿನ್ನೆ ರಾತ್ರಿವರೆಗೆ 110 ಜನ ದೂರು ದಾಖಲು ಮಾಡಿದ್ದಾರೆ. 110 ಜನರು 3.11 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಹೇಳಿಕೆ ನೀಡಿದ್ದಾರೆ.

ಫರ್ಲ್ಸ್ ವರ್ಡ್ಸ್ ವಂಚನೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದ್ದು. ಪ್ರಕರಣದ ಬಳಿಕ ಸಾಲು ಸಾಲಾಗಿ ಆಗಮಿಸಿ ಮಹಿಳೆಯರು ದೂರು ದಾಖಲಿಸುತ್ತಿದ್ದಾರೆ. ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಇಂದು ಸಹ ನೂರಾರು ಜನರಿಂದ ದೂರು ದಾಖಲು ಮಾಡಲಾಗಿದೆ. ಠಾಣೆಯ ಮುಂದೆಲ್ಲಾ ದೂರು ದಾಖಲಿಸಲು ಮಹಿಳೆಯರು ಕ್ಯೂ ನಿಂತಿದ್ದಾರೆ. ಮುತ್ತು ಪೋಣಿಸಿಕೊಟ್ರೆ ಲಾಭಾಂಶ ನೀಡುವುದಾಗಿ ಜನರಿಂದ ಹಣ ಹೂಡಿಕೆ ಮಾಡಿಸಲಾಗಿತ್ತು. ಬಳ್ಳಾರಿಯ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು, ಜನರಿಂದ ಕೋಟ್ಯಾಂತರ ಹಣ ಹೂಡಿಕೆ ಮಾಡಲಾಗಿತ್ತು. ಸುಮಾರು ಹತ್ತು ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ. ಫಲ್ಸ್ ವರ್ಡ್ಸ್ ಕಂಪನಿಯ ಮ್ಯಾನೇಜರ್ ಕುಮಾರ್ ಬಂಧನ ಮಾಡಲಾಗಿದೆ. ಮಾಲೀಕ ದೂದ್ದಂ ರವಿಗೆ ಪೊಲೀಸರು ಬಲೆ ಬೀಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: