ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಯಾವುದೇ ಕನ್ನಡ ಸಿನಮಾಗೆ ತೊಂದರೆ ಬಂದರು ನಾನು ಮುಂದಾಳತ್ವ ವಹಿಸುತ್ತೇನೆ ; ಶಿವರಾಜ್ ಕುಮಾರ್

ರಾಜ್ಯ(ಬೆಂಗಳೂರು),ಮಾ.24 : ಆರ್.ಆರ್.ಆರ್ ಸಿನಿಮಾಕ್ಕಾಗಿ ಜೇಮ್ಸ್ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವ ಕಿಚ್ಚು ವ್ಯಾಪಿಸುತ್ತಿದ್ದಂತೆ ನಟ ಶಿವರಾಜ್ ಕುಮಾರ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿ ಸುದ್ದೀಗೋಷ್ಠಿಯನ್ನು ನಡೆಸಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.

ಇಂದು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ನಡೆದ ಜಂಟಿ ಸುದ್ದೀಗೋಷ್ಠಿಯಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮಾತನಾಡಿ, ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಬರುತ್ತೆ-ಹೊಗುತ್ತೆ. ಚಿತ್ರತಂಡ ಮತ್ತು ಥಿಯೇಟರ್ ನಡುವಿನ ಮಾತುಕತೆ ಕೆಲವು ಸಲ ಅಗ್ರಿಮೆಟ್ ನಲ್ಲಿ ಆಗುತ್ತೆ, ಕೆಲವು ಬಾರಿ ಮಾತಿನ ಮೇಲೆಯೇ ಇರುತ್ತದೆ. ಡಿಸ್ಟ್ರಿಬ್ಯೂಟರ್ ಹಾಗೂ ಎಕ್ಸಿಬ್ಯೂಟರ್ ಗಳ ಮಧ್ಯೆ ಯಾವ ರೀತಿ ಮಾತುಕತೆ ಆಗಿತ್ರೋ ಗೊತ್ತಿಲ್ಲ. ಆದರೆ, ನಾನು ಎಲ್ಲರ ಪರವಾಗಿ ನಿಲ್ತೀನಿ ಎಂದು ಹೇಳಿದ್ದಾರೆ.

ಸಿನಿಮಾ ಇಂಡಸ್ಟ್ರಿ ಒಂದು ಕುಟುಂಬ ಇದ್ದಂತೆ. ಸಿಎಂ ಮಾತನಾಡಿದ್ದಾರೆ, ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ಅಭಿಮಾನಿಗಳು ಆತಂಕ ಪಡಬೇಡಿ. ನನ್ನ ತಮ್ಮನ ಸಿನಿಮಾ ಅಂತ ನಾನು ಇಲ್ಲಿ ಬಂದು ಮಾತನಾಡಿಲ್ಲ, ಯಾವ ಕನ್ನಡ ಸಿನಿಮಾ ಬಂದರೂ ನಾನು ಮುಂದಾಳತ್ವ ವಹಿಸುತ್ತೇನೆ ಎಂದಿದ್ದಾರೆ.

ಪರಭಾಷಾ ಸಿನಿಮಾ ಬರಲಿ ನಾವು ಬೇಡ ಅನ್ನಲ್ಲ, ನಮ್ಮ ಕನ್ನಡ ಚಿತ್ರಕ್ಕೆ ಅನ್ಯಾಯ ಆಗಬಾರದು ಅಷ್ಟೇ. ಕನ್ನಡ ಸಿನಿಮಾಗೆ ಅನ್ಯಾಯ ಆಗದಂತೆ ಸಿಎಂ ಸಾಹೇಬ್ರು ನೋಡಿಕೊಂಡಿದ್ದಾರೆ. ಇದರಲ್ಲಿ ಯಾರದ್ದು ತಪ್ಪು ಅಂತ ಹೇಳೋದು ಬೇಡ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸಬೇಕು. ಕನ್ನಡದ ಯಾವುದೇ ಸಿನಿಮಾಕ್ಕೂ ಸಮಸ್ಯೆ ಆದ್ರೂ ನಾನು ಬರ್ತೀನಿ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾರೆ.

ನಂತರ ಸಾ.ರಾ.ಗೋವಿಂದು ಮಾತನಾಡಿ, ಥಿಯೇಟರ್ ಮಾಲೀಕರು ಮಾತನಾಡಿಕೊಂಡು ಜೇಮ್ಸ್ ಚಿತ್ರವನ್ನು ಉಳಿಸಿಕೊಳ್ಳೋದಕ್ಕೆ ಮುಂದಾಗಿದ್ದಾರೆ. ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ಇದ್ದ ಕಡೆ, ಒಂದು ಕಡೆ ಜೇಮ್ಸ್ ಉಳಿಸಿಕೊಳ್ಳೇವೆ, ಇನ್ನೊಂದು ಕಡೆ ಆರ್.ಆರ್.ಆರ್ ಹಾಕ್ತಾರೆ. ತ್ರಿವೇಣಿ ಹಾಗೂ ಅನುಪಮಾ ಎರಡು ಥಿಯೇಟರ್ ನಲ್ಲಿ ಸಿನಿಮಾ ಆಗ್ತಿತ್ತು, ನಾಳೆಯಿಂದ ಅನುಪಮಾದಲ್ಲಿ ಆರ್.ಆರ್.ಆರ್ ಇರುತ್ತದೆ ಎಂದು ಹೇಳಿದ್ದಾರೆ.

ಜೇಮ್ಸ್ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 8-9 ಥಿಯೇಟರ್ ನಲ್ಲಿ ಪ್ರಾಬ್ಲಮ್ ಇತ್ತು. ಶಿವಣ್ಣ ಹಾಗೂ ವಾಣಿಜ್ಯ ಮಂಡಳಿ ಎಂಟ್ರಿಕೊಟ್ಟಿದ್ದರಿಂದ ಸಮಸ್ಯೆ ಬಗೆಹರಿದಿದೆ. ಜೇಮ್ಸ್ ಚಿತ್ರವು 400 ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ನಾಳೆಯಿಂದ 270 ಚಿತ್ರಮಂದಿರದಲ್ಲಿ ಜೇಮ್ಸ್ ಕಂಟಿನ್ಯೂ ಆಗ್ಇದೆ. 130 ಥಿಯೇಟರ್ ಬಿಟ್ಟುಕೊಡಬೇಕಾದ ಸಂದರ್ಭ ಬಂದಿದೆ. ಕಲೆಕ್ಷನ್ ಡೌನ್ ಇರೋ ಕಡೆ ಥಿಯೇಟರ್ ಬಿಟ್ಟುಕೊಡಲಾಗುತ್ತೆ ಎಂದಿದ್ದಾರೆ.(ಎಸ್.ಎಂ)

Leave a Reply

comments

Related Articles

error: