ಮೈಸೂರು

ನಾಯಕರ ಪಡೆ ವತಿಯಿಂದ ಎಲ್ ಜಿ ಹಾವನೂರ್ ಜಯಂತಿ ಆಚರಣೆ

ಮೈಸೂರು,ಮಾ.25:- ಮೈಸೂರು ನಾಯಕರ ಪಡೆ ವತಿಯಿಂದ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿದ ಧೀಮಂತ ನಾಯಕ   ಎಲ್.ಜಿ ಹಾವನೂರ್ ಜಯಂತಿಯನ್ನು ಸುಣ್ಣದಕೇರಿಯ ಮಹದೇಶ್ವರ ದೇವಸ್ಥಾನದ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿ ಬಳಿ ಆಚರಿಸಲಾಯಿತು.
ಪುಷ್ಪನಮನ ಸಲ್ಲಿಸಿ ಮಾತನಾಡಿದ ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ
ಅಂದಿನ ಮುಖ್ಯಮಂತ್ರಿಗಳಾಗಿದ್ದ   ಡಿ.ದೇವರಾಜ ಅರಸು ಅವರು ಸಮಾಜದ ಮುಖ್ಯವಾಹಿನಿಯಿಂದ ಬಹುದೂರವಾಗಿದ್ದ ಹಿಂದುಳಿದ ವರ್ಗಗಳ ಏಳಿಗೆಯ ಏಕೈಕ ಉದ್ದೇಶದಿಂದ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಅದಕ್ಕೆ ಕಾನೂನು ತಜ್ಞರಾದ   ಎಲ್ ಜಿ ಹಾವನೂರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಅದಕ್ಕೆ ತಕ್ಕಂತೆ ನ್ಯಾಯ ಒದಗಿಸಿ ರಾಜ್ಯಾದ್ಯಂತ ಸಂಚರಿಸಿ ಹಿಂದುಳಿದ ವರ್ಗಗಳ ಜನಜೀವನದ ಬಗ್ಗೆ ಅಧ್ಯಯನ ನಡೆಸಿ ಅವರಿಗೆ ರಾಜಕೀಯ, ಆರ್ಥಿಕ, ಶೈಕ್ಷಣಿಕ,ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರುವ ಬಗ್ಗೆ ಶಿಫಾರಸ್ಸನ್ನು ಮಾಡಿದರು. ಅದಕ್ಕೆ   ಡಿ.ದೇವರಾಜ ಅರಸರ ದಿಟ್ಟನಿರ್ಧಾರದ ಫಲ ಕೊಡುಗೆಯು ಕಾರಣವಾಯಿತು.  ಹಾವನೂರ್ ಅವರು ನಿತ್ಯ ಸ್ಮರಣೀಯ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಲೋಕೇಶ್ ಪಿಯಾ, ಸಂಘದ ಅಧ್ಯಕ್ಷರಾದ ಪಿ.ಸತೀಶ್ ಕಾರ್ಯದರ್ಶಿ ಬಿ.ಸಿದ್ದಪ್ಪ,ಮಂಜು, ಎಂ.ಸತೀಶ್,ಶಿವು, ಕೃಷ್ಣಪ್ಪ, ಕುಮಾರ್, ಬಲರಾಮ, ಶೇಖರ್,ಮಹೇಶ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: