ಮೈಸೂರು

ಪ್ರೊ.ಎಸ್.ಆರ್.ನಿರಂಜನ ಅವರಿಗೆ ಅಭಿನಂದನಾ ಸಮಾರಂಭ : ಮೇ.12ಕ್ಕೆ

ಮೈಸೂರು.ಮೇ.11 : ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ನ 2015-16ನೇ ಸಾಲಿನ ಪ್ರತಿಷ್ಠಿತ ಡಾ.ರಾಜಾರಾಮಣ್ಣ ಪ್ರಶಸ್ತಿಗೆ ಭಾಜನರಾಗಿರುವ  ಗುಲ್ಬರ್ಗಾ ವಿವಿಯ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಅವರಿಗೆ ಮೈಸೂರು ವಿವಿ ವತಿಯಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಜ್ಞಾನ ವಿಜ್ಞಾನ ವೇದಿಕೆಯ ಡಾ.ವಸಂತಕುಮಾರ್ ತಿಮಕಾಪುರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುರುವಾರ ನಗರದ  ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಈ ಅಭಿನಂದನಾ ಸಮಾರಂಭವು ಮೇ 12ರಂದು ಸಂಜೆ 5.30 ಕ್ಕೆ  ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ  ಜರುಗಲಿದೆ. ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನವರು ಪ್ರೊ.ಎಸ್.ಆರ್ ನಿರಂಜನ ಅವರನ್ನು ಸನ್ಮಾನಿಸಲಿದ್ದಾರೆ. ಹಿರಿಯ ವಿಜ್ಞಾನಿ ಪ್ರೊ.ಸಿ.ಮನೋಹರಾಚಾರಿ ಸನ್ಮಾನದ ನುಡಿಗಳನ್ನಾಡಲಿದ್ದಾರೆ. ಕುಲಸಚಿವ ಪ್ರೊ.ಆರ್.ರಾಜಣ್ಣ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಕಾರ್ಯದರ್ಶಿ ಪ್ರೊ.ಎನ್.ಕೆ.ಲೋಕನಾಥ್, ಸಂಚಾಲಕ ಪ್ರೊ.ಕೆ.ಎ.ರವೀಶ್ ಹಾಗೂ ಡಾ.ಅಮೃತೇಶ್ ಉಪಸ್ಥಿತರಿದ್ದರು. (ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: