ಮೈಸೂರು

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮೈಸೂರು, ಮಾ.29:- ಶಾಸಕರಾದ ಎಸ್.ಎ.ರಾಮದಾಸ್ ಅವರು ಕ್ಷೇತ್ರದ ವಾರ್ಡ್ ನಂ.49 ಮತ್ತು 51 ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಿನ್ನೆ ಚಾಲನೆ ನೀಡಿದರು.

ವಾರ್ಡ್ ನಂ.49 ರಲ್ಲಿ ಅಗ್ರಹಾರ ವೃತ್ತದಿಂದ ದಿಂದ ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನದ ವರೆಗಿನ ಯುಜಿಡಿ ಕಾಮಗಾರಿ ಹಾಗೂ ವಾರ್ಡ್ ನಂ.51 ರಲ್ಲಿ ರಾಮಾನುಜ ರಸ್ತೆಯ ಆಸುಪಾಸಿನಲ್ಲಿರುವ ಪಾರ್ಕ್ ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು  ಶಾಸಕರಾದ ಎಸ್.ಎ.ರಾಮದಾಸ್ ಅವರು ನೀಡಿದರು.

ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ  ಬಿ.ವಿ.ಮಂಜುನಾಥ್ ಅವರು,  ಸೌಮ್ಯ ಉಮೇಶ್ ಅವರು, ಕೆ.ಆರ್.ಕ್ಷೇತ್ರದ ಭಾಜಪಾ ಉಪಾಧ್ಯಕ್ಷರಾದ ಎಂ.ಆರ್ ಬಾಲಕೃಷ್ಣ, ಸಂತೋಷ್ ಶಂಭು, ಆಶ್ರಯ ಸಮಿತಿಯ ಹೇಮಂತ್ ಕುಮಾರ್, ಪ್ರಮುಖರಾದ ಸಂತೋಷ್, ಉಮೇಶ್ ಕುಮಾರ್ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್. ಎಚ್)

Leave a Reply

comments

Related Articles

error: