ಸುದ್ದಿ ಸಂಕ್ಷಿಪ್ತ

ಪರಂಪರೆಯಿಂದ ‘ಗಮಕ-ಚಿಂತನ ಮಂಥನ’ ಮೇ.13 ಮತ್ತು 14ರಂದು

ಮೈಸೂರು.ಮೇ.11 : ಭಾರತೀಯ ಸಂಸ್ಕೃತಿಯನ್ನು ಬಿತ್ತರಿಸುವ ಪರಂಪರೆ ಸಂಸ್ಥೆಯಿಂದ ಮೇ.13 ಮತ್ತು 14ರಂದು ಎರಡು ದಿನಗಳ ಕಾಲ ‘ಗಮಕ-ಚಿಂತನ ಮಂಥನ’ ಕಾರ್ಯಕ್ರಮವನ್ನು ನಾದಬ್ರಹ್ಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಮೇ.13ರ ಬೆಳಿಗ್ಗೆ 9ಕ್ಕೆ ಸಂಶೋಧಕ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಉದ್ಘಾಟಿಸುವರು. ಹಿರಿಯ ಗಮಕ ವಿದ್ವಾಂಸರು ಗಮಕ-ವಾಚಕ- ವ್ಯಾಖ್ಯಾನದ ಬಗ್ಗೆ ವಿಚಾರವನ್ನು ಮಂಡಿಸುವರು ಮತ್ತು ಗಮಕಿಗಳಿಂದ ಸಂವಾದ ನಡೆಯುವುದು.

ಸಂಜೆ 5.30ಕ್ಕೆ ಸಾರ್ವಜನಿಕರಿಗೆ ವಿವಿಧ ಛಂದೋರೂಪದ ಕಾವ್ಯಗಳ ವಾಚನ-ವ್ಯಾಖ್ಯಾನ ಕಾರ್ಯಕ್ರಮವನ್ನು ಆಯೋಜಿಸಿದ್ದು ಹಿರಿಯ ಗಮಕಿಗಳು ನಡೆಸುವರು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9986037311 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: