ಮೈಸೂರು

ಭ್ರಷ್ಟಾಚಾರ ಮುಕ್ತ ಜೀವನಕ್ಕೆ ಟೊಂಕ ಕಟ್ಟಿ ನಿಲ್ಲಬೇಕು : ಡಾ.ಬಿ.ಎಚ್.ಮಂಜುನಾಥ್

ಮೈಸೂರು, ಮೇ 11:  ಗುರುವಾರ ಮೈಸೂರಿನ ಕಾರಾಗೃಹದಲ್ಲಿ ಕಾರಾಗೃಹ ಇಲಾಖೆ ಹಾಗೂ ವೃಕ್ಷಂ ಟ್ಯಾಲೆಂಟ್ ಗ್ರೂಪ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ 2 ದಿನಗಳ “ಪ್ರೇರಣೆ ಮತ್ತು ವ್ಯಕ್ತಿತ್ವ ವಿಕಸನ” ತರಬೇತಿ ಶಿಬಿರವನ್ನು ಡಾ.ಬಿ.ಹೆಚ್.ಮಂಜುನಾಥ್ ಉದ್ಘಾಟಿಸಿದರು.

ನಂತರ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ  ಮಾತಾನಾಡಿದ ಅವರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುತ್ತಾ  ಇಂದಿನ  ಭ್ರಷ್ಟಚಾರ ಸಮಾಜದ ಬಗ್ಗೆ ಬೇಸರ ವ್ಯಕ್ತಪಡಿಸಿ ಭ್ರಷ್ಟಚಾರ ಮುಕ್ತ ಜೀವನಕ್ಕೆ ಟೊಂಕ ಕಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.  ದೇಶಸೇವೆ ಮಾಡಲು ಈ ಹುದ್ದೆ ಸುಲಭವಾದ ದಾರಿ ಈ ದಾರಿಯಲ್ಲಿ ನಮ್ಮ  ಆಯ್ಕೆಗಳು ಮುಖ್ಯ ಪಾತ್ರವಹಿಸುತ್ತವೆ ಎಂದರು.
ವೃಕ್ಷಂ ಟ್ಯಾಲೆಂಟ್ ಗ್ರೂಪ್‍ನ ಸಂಸ್ಥಾಪಕ  ಸುರೇಶ್‍ಕುಮಾರ್ ಮಾತಾನಾಡಿ, ಸಮವಸ್ತ್ರ ಎಂಬುದು ಸ ಎಂಬ ಅಕ್ಷರದಿಂದ ಪ್ರಾರಂಭವಾಗಿದ್ದು ಸ ಎಂದರೆ ಸಮಾನತೆ ಮತ್ತು ಸಂಸ್ಕಾರ ಇವರೆಡರ ಸಂಗಮ. ಇದನ್ನು ನಾವು ಜೀವನದಲ್ಲಿ ಹಾಗೂ ನಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಪ್ರೇರಣೆಯಾಗಬೇಕು  ಎಂದು ನುಡಿದರು.
ನೆಕ್ಟರ್ ಪ್ರಶ್ ಮೈಸೂರಿನ ಜಂಟಿ ವ್ಯವಸ್ಥಾಪಕರಾದ  ಛಾಯ ನಂಜಪ್ಪನವರು ಮಾತಾನಾಡಿ, ಸಮಾಜಕ್ಕೆ  ನ್ಯಾಯಸಮ್ಮತವಾದ ಬೆಲೆ ನೀಡಬೇಕಾದರೆ ಕೇವಲ ವಿದ್ಯಾಭ್ಯಾಸ ಮಾತ್ರ ಮುಖ್ಯವಲ್ಲ. ನಮ್ಮ ಉದ್ದೇಶಗಳು ಮತ್ತು  ನಡವಳಿಕೆಗಳು ಉತ್ತಮವಾಗಿರಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಪಿ.ಎಸ್. ಅಂಬೇಕರ್ ಮಾತಾನಾಡಿ ಇತ್ತೀಚಿಗೆ ಬಳ್ಳಾರಿಯಲ್ಲಿ ಕಾರಾಗೃಹದಲ್ಲಿ ನಡೆದ ಒಂದು  ಘಟನೆಯನ್ನು ವಿವರಿಸುತ್ತಾ ಪೊಲೀಸ್ ಇಲಾಖೆಯಲ್ಲಿ  ಕೆಲಸ ನಿರ್ವಹಿಸುವಾಗ  ಶ್ರದ್ದೆಯ ಜೊತೆಗೆ ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕು.  ಸ್ವಲ್ಪ ಎಚ್ಚರ ತಪ್ಪಿದರೆ ನಮ್ಮದಲ್ಲದ ತಪ್ಪಿಗೆ ಕರ್ತವ್ಯಲೋಪವೆಸಗಿರುವ ಅಪವಾದ ಎದುರಿಸಬೇಕಾಗುತ್ತದೆ ಎಂದರು. (ವರದಿ: ಕೆ.ಎಸ್, ಎಲ್.ಜಿ)

Leave a Reply

comments

Related Articles

error: