Uncategorizedಮೈಸೂರು

ಜೂನ್ ೧೫ರೊಳಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿ: ನಯೀಮಾ ಸುಲ್ತಾನ

ಮೈಸೂರು, ಮೇ ೧೧: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸಯೀಮಾ ಸುಲ್ತಾನ ಅಧ್ಯಕ್ಷತೆಯಲ್ಲಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ಕೆಡಿಪಿ ಸಭೆ ನಡೆಯಿತು.
ಸಭೆಯಲ್ಲಿ ನಯೀಮಾ ಸುಲ್ತಾನ ಗರಂ ಆಗಿದ್ದರು. ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಲು ವಿಳಂಬವಾಗಿರುವುದಕ್ಕೆ ಕೆಂಡಾಮಂಡಲರಾದ ಅವರು ಡಿಡಿಪಿಐ ಬಸಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರದಿಂದ ಮಕ್ಕಳಿಗೆ ಸಮವಸ್ತ್ರ ಬಿಡುಗಡೆಯಾದರೂ ವಿಳಂಬ ಮಾಡುತ್ತಿರುವುದು ಯಾಕೆ. ಕೂಡಲೇ ಈ ವಿಳಂಬ ನೀತಿಯನ್ನು ಬಿಟ್ಟು ಜೂ.೧೫ರೊಳಗೆ ೨೦೧೭ನೇ ಸಾಲಿನ ಸಮವಸ್ತ್ರಗಳನ್ನು ವಿತರಣೆ ಮಾಡಬೇಕು ಎಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಸಪ್ಪ, ಸಮವಸ್ತ್ರಗಳನ್ನು ಸರಬರಾಜು ಮಾಡಲು ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಸಮವಸ್ತ್ರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಕ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದ್ದು, ಪ್ರಾಥಮಿಕ ಶಾಲಾ ವಿಭಾಗದಲ್ಲಿ ೩೨೬, ಫ್ರೌಢ ಶಾಲಾ ವಿಭಾಗದಲ್ಲಿ ೨೨೧ ಶಿಕ್ಷಕರ ಕೊರತೆ ಇದೆ ಎಂದು ಹೇಳಿದರು.
ಸದಸ್ಯ ಬೀರಿಹುಂಡಿ ಬಸವಣ್ಣ ಆರ್‌ಟಿಇ ಅಡಿ ಕೆಲ ಶಾಲೆಗಳು ಪ್ರವೇಶಾತಿ ನಿರಾಕರಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ಪ್ರವೇಶಾತಿ ನಿರಾಕರಿಸಿದ್ದರು ಕ್ರಮ ಕೈಗೊಳ್ಳದೆ ಸುಮ್ಮನೇ ಇರುವುದಾದರು ಯಾಕೆ ಎಂದು ಬಸಪ್ಪ ಅವರನ್ನು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಬಸಪ್ಪ ನಗರದ ಕೌಟಿಲ್ಯ, ಮೌಂಟ್ ಮುಟೇರಾ ನೌಕೀಸ್, ಜ್ಞಾನ ಸರೋವರ. ಆರ್‍ಕಿಡ್ ಶಾಲೆಗಳು ಪ್ರವೇಶಾತಿ ನಿರಾಕರಿಸಿದ್ದು, ಶಾಲೆಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಿಇಒ ಶಿವಶಂಕರ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ್ ಮೂರ್ತಿ, ಪಿಸಿಒ ಪ್ರಭುಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: