ಮೈಸೂರು

ಏಚಗಳ್ಳಿ ಗ್ರಾಮಸ್ಥರನ್ನು ಭಯ ಬೀಳಿಸಿದ್ದ ಚಿರತೆಯ ಸೆರೆ

ಮೈಸೂರು, ಮಾ.31:-  ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ಕ್ಷೇತ್ರಕ್ಕೆ ಸೇರುವ ಏಚಗಳ್ಳಿ ಗ್ರಾಮದ ಬಿಜೆಪಿ ಮುಖಂಡ ಸೋಮಶೇಖರ್ ದೀಪು ಹಾಗೂ ದಿನೇಶ್ ಅವರ ತೋಟದಲ್ಲಿ ಇರಿಸಿದ್ದ ಬೋನಿನಲ್ಲಿ ಎರಡು ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ.

ಇನ್ನೂ ಎರಡು ಮೂರು ಚಿರತೆಗಳು ಇರುವ ಶಂಕೆಯನ್ನು  ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಕೆಲವು ತಿಂಗಳಿನಿಂದ ತೋಟಗಳಲ್ಲಿ ವಾಸಮಾಡುವ ಗ್ರಾಮಸ್ಥರ ಮೇಕೆಗಳು, ನಾಯಿಮರಿಗಳನ್ನು ಚಿರತೆಗಳು ಕೊಂದು ಹಾಕಿರುವುದು ಇಲ್ಲಿನ ಗ್ರಾಮಸ್ಥರಲ್ಲಿ ಆತಂಕವನ್ನು ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ  ಅರಣ್ಯ ಇಲಾಖೆಗೆ ಗ್ರಾಮಸ್ಥರು ವಿಚಾರ ತಿಳಿಸಿದ್ದು, ಚಿರತೆ ಸೆರೆಗೆ ಬೋನಿರಿಸಿದ್ದರು. ಇಂದು  ಬೆಳಗಿನ ಜಾವ  5. 45ರ ಸುಮಾರಿಗೆ ಚಿರತೆ  ಸೆರೆಯಾಗಿದೆ.

ಕಾರ್ಯಾಚರಣೆಯಲ್ಲಿ ನಂಜನಗೂಡು ಅರಣ್ಯ ವಲಯ ಅಧಿಕಾರಿಗಳಾದ ರಕ್ಷಿತ್ ಶರತ್ ಕುಮಾರ್ ವಲಯ ಅರಣ್ಯ ಉಪವಿಭಾಗಾಧಿಕಾರಿ ಮದನ್ ಕುಮಾರ್ ಭಾಗಿಯಾಗಿದ್ದರು. (ಕೆ.ಎಸ್,ಎಸ್. ಎಚ್)

Leave a Reply

comments

Related Articles

error: