
ಮೈಸೂರು
ಆರ್.ಟಿ.ಇ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿಭಟನೆ
ಮೈಸೂರು,ಮೇ 11: ಆರ್.ಟಿ.ಇ ಅಡಿಯಲ್ಲಿ ದಾಖಲಾಗಿರುವ ಮಕ್ಕಳಿಗೂ ಶುಲ್ಕ ನೀಡುವಂತೆ ಒತ್ತಾಯಿಸುತ್ತಿರುವ ನಂಜನಗೂಡು ಪಟ್ಟಣ ಮತ್ತು ತಾಲೂಕಿನ ಖಾಸಗಿ ಶಾಲೆಗಳ ವಿರುದ್ದ ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಎದುರು ಆರ್.ಟಿ.ಇ ವಿದ್ಯಾರ್ಥಿಗಳ ಪೋಷಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಡಿ.ಡಿ.ಪಿ.ಐ ಆಗಮಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಡಿ.ಡಿ.ಪಿ.ಐ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ರಾಜಶೇಖರ್, ಕಲೀಮ್, ಶ್ರೀಕಂಟಸ್ವಾಮಿ,ರಾಜಲಕ್ಷ್ಮಿ , ಪವಿತ್ರ ಸೋಮಶೇಖರ್ ಸೇರಿದಂತೆ ನೂರಾರು ಪೋಷಕರು ಭಾಗಿಯಾಗಿದ್ದರು. (ವರದಿ: ಕೆ.ಎಸ್, ಎಲ್.ಜಿ)