ಸುದ್ದಿ ಸಂಕ್ಷಿಪ್ತ

ಮೇ.13ರಂದು ಸಾರ್ವಜನಿಕ ವಲಯದ ವಿಮಾ ಕಂಪನಿಗಳ ಷೇರು ವಿಕ್ರಯ ವಿರೋಧಿಸಿ ಸಮಾವೇಶ

ಮೈಸೂರು.ಮೇ.11 : ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ಷೇರುಗಳ ವಿಕ್ರಯವನ್ನು ವಿರೋಧಿಸಿ ಸಮಾವೇಶವನ್ನು  ಮೇ 13ರಂದು ಬೆಳಿಗ್ಗೆ 10.30ಕ್ಕೆ ಜೆ.ಎಲ್.ಬಿ. ರಸ್ತೆಯ ರೋಟರಿ ಕ್ಲಬ್ ಹಾಲ್ ನಲ್ಲಿ ಆಯೋಜಿಸಲಾಗಿದೆ.

ಸಮಾವೇಶವನ್ನು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ನೌಕರರ ಹಾಗೂ ಅಧಿಕಾರಿಗಳ ಜಂಟಿ ಕ್ರಿಯಾ ಸಮಿತಿಯಿಂದ ಕರೆ ನೀಡಿದ್ದು ಎಐಐಇಎ, ಎನ್.ಎಫ್ ಜಿಐಇ, ಎನ್.ಐಎಓಎ, ಎನ್.ಐಸಿಓಎ, ಯುಐಐಓಎ ಹಾಗೂ ಓಐಸಿಓಎ ಸಂಸ್ಥೆಗಳು ನೇತೃತ್ವ ವಹಿಸಲಿವೆ. ಕಾರ್ಮಿಕರು ಹಾಗೂ ಅಧಿಕಾರಿ ವರ್ಗದವರು ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.(ಕೆ.ಎಂ.ಆರ್)

Leave a Reply

comments

Related Articles

error: