ಕರ್ನಾಟಕಪ್ರಮುಖ ಸುದ್ದಿ

ಇದೊಳ್ಳೆ ರಾಮಾಯಣ ರೀ ನಿಮ್ದು…

ಬೆಂಗಳೂರು: ತಮಿಳುನಾಡು-ಕರ್ನಾಟಕದ ಮಧ್ಯೆ ನಡೆಯುತ್ತಿರುವ ಕಾವೇರಿ ನೀರು ಹಂಚಿಕೆ ವಿವಾದದ ಬಗ್ಗೆ ಕನ್ನಡ ನ್ಯೂಸ್‍ ಚಾನೆಲ್ ನಿರೂಪಕಿಯೊಬ್ಬರು ಕೇಳಿದ ಪ್ರಶ್ನೆಯಿಂದ ಅಸಮಾಧಾನಗೊಂಡ ಬಹುಭಾಷಾ ನಟ ಪ್ರಕಾಶ್ ರೈ ಸಂದರ್ಶನದ ಮಧ್ಯದಲ್ಲೇ ಹೊರನಡೆದಿದ್ದಾರೆ.

‘ಇದೊಳ್ಳೆ ರಾಮಾಯಣ’ ಚಿತ್ರದ ಪ್ರಚಾರದ ವೇಳೆ ನಿರೂಪಕಿ ಕೇಳಿದ ಪ್ರಶ್ನೆಗೆ ಕುಪಿತರಾದ ಪ್ರಕಾಶ್ ರೈ, ನಾನು ಬಂದಿರುವುದು ಇದೊಳ್ಳೆ ರಾಮಾಯಣದ ಚಿತ್ರೀಕರಣಕ್ಕಾಗಿ. ಕಾವೇರಿ ಬಗ್ಗೆ ಮಾತನಾಡಲು ಅಲ್ಲ. ಈ ವಿಚಾರ ತುಂಬಾ ಸೂಕ್ಷ್ಮವಾಗಿದ್ದು, ಈ ಬಗ್ಗೆ ಎಲ್ಲ ಕಾರ್ಯಕ್ರಮಗಳಲ್ಲೂ ಮಾತನಾಡುವುದು ಅಸಾಧ್ಯ. ಜನರು ಈಗಾಗಲೇ ನೋವಿನಲ್ಲಿದ್ದಾರೆ. ಈ ಸಂದರ್ಭ ನಟರಿಂದ ಕಾವೇರಿ ವಿವಾದದ ಬಗ್ಗೆ ಹೇಳಿಕೆ ಪಡೆಯುವುದರಿಂದ ಉಂಟಾಗುವ ಲಾಭವೇನು? ನೀವು ಬರೀ ವಿವಾದಗಳನ್ನು ಹುಟ್ಟುಹಾಕಲು ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತೀರಿ ಎಂದು ಹೇಳಿ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.

ಈ ಬಗ್ಗೆ ವಿವಾದಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ‘ನೋವಾಗಿದ್ರೆ ಕ್ಷಮೆ ಕೇಳ್ತೆನೆ’ ಎಂದು ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ.

 

 

Leave a Reply

comments

Related Articles

error: