ಕರ್ನಾಟಕಪ್ರಮುಖ ಸುದ್ದಿ

ಏ.09, 10 ಮತ್ತು 11 ರಂದು ವಾರ್ಷಿಕ ಪೂಜಾ ಕಾರ್ಯಕ್ರಮ

ರಾಜ್ಯ(ಮಡಿಕೇರಿ )ಏ.8:-ಮಡಿಕೇರಿ ತಾಲ್ಲೂಕು, ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಲ್ಲಿ 2022ನೇ ಸಾಲಿನ “ವಾರ್ಪಿಕೋತ್ಸವ”ವವು ಏಪ್ರಿಲ್, 09, 10 ಮತ್ತು 11 ರಂದು ಉಚ್ಚಿಲ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀ ಭಗಂಡೇಶ್ವರ-ತಲಕಾವೇರಿ ಮತ್ತು ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.
ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಏಪ್ರಿಲ್, 09 ರಂದು ಭಗಂಡೇಶ್ವರ ದೇವರಿಗೆ ಬೆಳಗ್ಗೆ 6 ಗಂಟೆಯಿಂದ 7.30 ಗಂಟೆಯವರೆಗೆ ಗಣಪತಿ ಹೋಮ. ಬೆಳಗ್ಗೆ 8 ಯಿಂದ 9 ಗಂಟೆಯವರೆಗೆ ಏಕದಶ ರುದ್ರಾಭಿಷೇಕ. ಬೆಳಗ್ಗೆ 9 ಗಂಟೆಯಿಂದ 10.30ರ ವರೆಗೆ ನವಕ ಮತ್ತು 108 ಕಳಶಾಭಿಷೇಕ. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ. ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ.
ಏಪ್ರಿಲ್, 10 ರಂದು ಸುಬ್ರಹ್ಮಣ್ಯ ದೇವರಿಗೆ ಬೆಳಗ್ಗೆ 6 ಗಂಟೆಯಿಂದ 7.30 ಗಂಟೆಯವರೆಗೆ ಕ್ಕೆ ಗಣಪತಿ ಹೋಮ. ಬೆಳಗ್ಗೆ 8 ಯಿಂದ 9 ಗಂಟೆಯವರೆಗೆ ದಾರಾಭಿಷೇಕ ಮತ್ತು ಕ್ಷೀರಾಭಿಷೇಕ. ಬೆಳಗ್ಗೆ 9 ಗಂಟೆಯಿಂದ 10.30ರ ವರೆಗೆ ನವಕ ಮತ್ತು 108 ಕಳಶಾಭಿಷೇಕ. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ. ಪ್ರಸಾದ ವಿತರಣೆ.
ಏಪ್ರಿಲ್, 11 ರಂದು ಮಹಾವಿಷ್ಣು ದೇವರಿಗೆ ಬೆಳಗ್ಗೆ 6 ಗಂಟೆಯಿಂದ 7.30 ಗಂಟೆಯವರೆಗೆ ಗಣಪತಿ ಹೋಮ. ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಪವಮಾನಾಭಿಷೇಕ. ಬೆಳಗ್ಗೆ 9 ಗಂಟೆಯಿಂದ 10.30 ರವರೆಗೆ ನವಕ ಮತ್ತು 108 ಕಳಶಾಭಿಷೇಕ. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ. ಪ್ರಸಾದ ವಿನಿಯೋಗ ವಿತರಣೆ.
ಏಪ್ರಿಲ್, 10 ರಂದು ಶ್ರೀ ತಲಕಾವೇರಿ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಯಿಂದ ಗಣಪತಿಹೋಮ, ಕಳಶಾಭಿಷೇಕ, ಪಂಚಗವ್ಯ, 108 ಕಳಶಾಭಿಷೇಕ. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ ಎಂದು ಶ್ರೀ ಭಗಂಡೇಶ್ವರ – ತಲಕಾವೇರಿ ಮತ್ತು ಸಮೂಹ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: